alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ದಾಖಲೆಗೆ ಐರನ್ ಬಾಕ್ಸ್ ಹಿಡಿದ ವ್ಯಕ್ತಿ

iron

ವಿಶ್ವ ದಾಖಲೆ ಮಾಡಲು ಜನರು ಏನೆಲ್ಲ ಮಾಡ್ತಾರೆ. ಸತತ ಪರಿಶ್ರಮ ಹಾಗೂ ಶ್ರದ್ಧೆ ಇದಕ್ಕೆ ಬಹಳ ಮುಖ್ಯ. ಚೀನಾದ ವ್ಯಕ್ತಿಯೊಬ್ಬ ವಿಶ್ವ ದಾಖಲೆ ಮಾಡಲು ಇಸ್ತ್ರಿ ಪೆಟ್ಟಿಗೆ ಹಿಡಿದಿದ್ದಾನೆ.

ಕಡಿಮೆ ಸಮಯದಲ್ಲಿ ಹೆಚ್ಚು ಬಟ್ಟೆಗಳಿಗೆ ಇಸ್ತ್ರಿ ಮಾಡುವ ಗುರಿ ಚೀನಾದ ಡೇನಿಯಲ್ ನದ್ದು. ಈಗಾಗಲೇ ಈ ರೆಕಾರ್ಡ್ ಬ್ರಿಟನ್ ನ ಗಾರ್ಥ್ ಸ್ಯಾಂಡರ್ಸ್ ಹೆಸರಿನಲ್ಲಿದೆ. ಆತ 100 ಗಂಟೆಗಳಲ್ಲಿ 2000 ಬಟ್ಟೆಗಳಿಗೆ ಇಸ್ತ್ರಿ ಮಾಡಿ ರೆಕಾರ್ಡ್ ಮಾಡಿದ್ದ. ಅದಕ್ಕೂ ಮುನ್ನ ಜಾನೆಟ್ ಹೇಸ್ಟಿಂಗ್ಸ್ 80 ಗಂಟೆಯಲ್ಲಿ 1157 ಬಟ್ಟೆಗಳಿಗೆ ಇಸ್ತ್ರಿ ಮಾಡಿ ವಿಶ್ವದಾಖಲೆ ಮಾಡಿದ್ದ.

ಡೇನಿಯಲ್ 101 ಗಂಟೆಯಲ್ಲಿ 2100 ಬಟ್ಟೆಗಳನ್ನು ಇಸ್ತ್ರಿ ಮಾಡಲು ಹೊರಟಿದ್ದಾನೆ. ಈ ವೇಳೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ. ಎಲೆಕ್ಟ್ರಿಕಲ್ ಐರನ್ ಬಾಕ್ಸ್ ನಿಂದ ಡೇನಿಯಲ್, ಇಸ್ತ್ರಿ ಮಾಡಲಿದ್ದಾನೆ. ಈತನ ಕೈಚಳಕ ನೋಡಲು ಜನ ಸಾಗರವೇ ನೆರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...