alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಪಗೊಂಡ ಯುವತಿ 97 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಜಿಗಿದ್ರೂ…!?

ತೈವಾನ್ ನ ತೈನಾನ್ ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬಾಯ್ ಫ್ರೆಂಡ್ ಮೇಲೆ ಕೋಪಗೊಂಡ ಯುವತಿಯೊಬ್ಬಳು ಪ್ರತಿ ಗಂಟೆಗೆ 97 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಜಿಗಿದಿದ್ದಾಳೆ.

ಆಶ್ಚರ್ಯಕರವೆಂದ್ರೆ ಅಷ್ಟು ವೇಗದಲ್ಲಿ ಹೋಗ್ತಿದ್ದ ಕಾರಿನಿಂದ ಜಿಗಿದ್ರೂ ಹುಡುಗಿಗೆ ಏನೂ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು ಬಿದ್ದ ತಕ್ಷಣ ಎದ್ದು ನಿಂತಿದ್ದಾಳೆ ಹುಡುಗಿ. ಘಟನೆ ನಂತ್ರ ವಿಚಾರಣೆ ನಡೆಸಿದ ಪೊಲೀಸರು ಯಾವುದೇ ದೂರು ದಾಖಲಿಸಿಕೊಳ್ಳದೆ ಜೋಡಿಯನ್ನು ಬಿಟ್ಟಿದ್ದಾರೆ.

ಕಾರಿನ ಬಾಗಿಲು ತೆರೆಯುತ್ತಿರುವುದನ್ನು ನೋಡಿದ ಚಾಲಕ ಕಾರನ್ನು ರಸ್ತೆ ಬದಿಗೆ ಕೊಂಡೊಯ್ದಿದ್ದಾನೆ. ಇದ್ರಿಂದಾಗಿ ಹುಡುಗಿ ಬದುಕುಳಿದಿದ್ದಾಳೆ. ರಸ್ತೆ ಮಧ್ಯೆ ಜಿಗಿದಿದ್ದರೆ ಹುಡುಗಿ ಅಲ್ಲಿಯೇ ಸಾವನ್ನಪ್ಪುತ್ತಿದ್ದಳು ಎಂದು ಮೂಲಗಳು ಹೇಳಿವೆ. ಹಿಂದೆ ಬರ್ತಿದ್ದ ಕಾರಿನ ಡ್ಯಾಷ್ಕ್ಯಾಮ್ ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಕಾರಿನಲ್ಲಿದ್ದ ಹುಡುಗಿ ಹಾಗೂ ಬಾಯ್ ಫ್ರೆಂಡ್ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೋಪಗೊಂಡ ಹುಡುಗಿ ಕಾರು ನಿಲ್ಲೋದನ್ನು ಕಾಯಲಿಲ್ಲ. ಚಲಿಸುತ್ತಿದ್ದಾಗಲೇ ಬಾಗಿಲು ತೆರೆದು ಜಿಗಿದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...