alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗಾಗಿ 300 ಮಿಲಿಯನ್ ಡಾಲರ್ ಆಸ್ತಿ ತ್ಯಜಿಸಿದ್ಲು ಹುಡುಗಿ

angeline-francis-khoo

ಪ್ರೀತಿ ಕುರುಡು ಅಂತಾರೆ. ಪ್ರೇಮಕ್ಕೆ ಜಾತಿ, ಹಣ, ಅಂತಸ್ತು, ವಯಸ್ಸು ಯಾವುದರ ಹಂಗೂ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಏಂಜಲೀನ್ ಫ್ರಾನ್ಸಿಸ್ ಖೂ ಅನ್ನೋ ಯುವತಿ. ಈಕೆ ಮಲೇಷಿಯಾದ ಖ್ಯಾತ ಉದ್ಯಮಿಯ ಮಗಳು. ಆತನ ಆಸ್ತಿ 300 ಮಿಲಿಯನ್ ಡಾಲರ್.

angeline-francis-khoo-4

ಏಂಜಲೀನ್ ಕೂಡ ಮಿಸ್ ಮಲೇಷಿಯಾ ಸೌಂದರ್ಯ ಸ್ಪರ್ಧೆ ಗೆದ್ದ ಚೆಲುವೆ. ಆದ್ರೆ ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾಳೆ. ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಏಂಜಲೀನ್ ಗೆ ಕೆರಿಬಿಯನ್ ಮೂಲದ ಡೇಟಾ ಸೈಂಟಿಸ್ಟ್ ಜೆಡಿಯಾದ್ ಫ್ರಾನ್ಸಿಸ್ ಎಂಬಾತನ ಮೇಲೆ ಲವ್ವಾಗಿತ್ತು.

ಏಂಜಲೀನ್ ತಂದೆ ಈ ಮದುವೆಗೆ ಒಪ್ಪಲೇ ಇಲ್ಲ. ಹಣ, ಅಂತಸ್ತು, ಸೌಂದರ್ಯ ಯಾವುದರಲ್ಲೂ ಜೆಡಿಯಾದ್ ತನ್ನ ಮಗಳಿಗೆ ಸರಿಸಮನಾಗಿಲ್ಲ ಅನ್ನೋದು ತಂದೆಯ ಅಭಿಪ್ರಾಯವಾಗಿತ್ತು. ಆದ್ರೆ ಏಂಜಲೀನ್ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ತೊರೆದು, ಜೇಡ್ ನನ್ನು ವಿವಾಹವಾಗಿದ್ದಾಳೆ.

angeline-francis-khoo-1

ಐಷಾರಾಮಿಯಾಗಿ ಬೆಳೆದಿದ್ದ ಆಕೆಗೆ ಸರಳ ಜೀವನ ಆರಂಭದಲ್ಲಿ ಕಷ್ಟವಾಗಿತ್ತು. ಹಣಕಾಸಿನ ತೊಂದರೆ ಕೂಡ ಇತ್ತು. ಆದ್ರೆ ಪ್ರೀತಿಯ ಮುಂದೆ ಅದ್ಯಾವುದೂ ಸಮಸ್ಯೆಯಾಗಲೇ ಇಲ್ಲ. ಜೇಡ್ ಹಾಗು ಏಂಜಲೀನ್ 10 ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದಾರೆ. ಹಣದ ಹಿಂದೆ ಬಿದ್ದಿರುವ ಅವಳ ತಂದೆ, ತಮ್ಮ ಪತ್ನಿಯಿಂದ್ಲೂ ಬೇರೆಯಾಗಿ ಒಂಟಿ ಬದುಕು ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...