alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಖಾ ನಿಷೇಧಕ್ಕೆ ಜರ್ಮನಿ ಚಾನ್ಸಲರ್ ಕರೆ

anjela

ಜರ್ಮನಿಯ ಚಾನ್ಸಲರ್ ಏಂಜೆಲಾ ಮಾರ್ಕೆಲ್ ದೇಶದಲ್ಲಿ ಬುರ್ಖಾ ನಿಷೇಧಕ್ಕೆ ಕರೆ ಕೊಟ್ಟಿದ್ದಾರೆ. ನಿರಾಶ್ರಿತರ ಈ ಬಿಕ್ಕಟ್ಟು ಮುಂದೆಂದೂ ಪುನರಾವರ್ತನೆಯಾಗಬಾರದೆಂದು ಅಭಿಪ್ರಾಯಪಟ್ಟಿದ್ದಾರೆ.

ಇಡೀ ಮುಖಕ್ಕೆ ಮುಸುಕು ಹಾಕಿಕೊಳ್ಳುವುದು ನಮ್ಮ ದೇಶದಲ್ಲಿ ಸಮ್ಮತವಲ್ಲ, ಅದನ್ನು ನಿಷೇಧಿಸಬೇಕು, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಇದನ್ನು ಕಾನೂನುಬದ್ಧಗೊಳಿಸಬೇಕು ಅಂತಾ ಹೇಳಿದ್ದಾರೆ. ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಯೂನಿಯನ್ ಪಕ್ಷವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ರು.

ಕಳೆದ ತಿಂಗಳು ನೆದರ್ಲೆಂಡ್ ನಲ್ಲಿ ಕೂಡ ಡಚ್ ಸಂಸದರು ಇಂಥದ್ದೇ ತೀರ್ಮಾನ ಕೈಗೊಂಡಿದ್ದಾರೆ. ಸಾರ್ವಜನಿಕ ಸಾರಿಗೆ, ಶಿಕ್ಷಣ, ಆರೋಗ್ಯ, ಸರ್ಕಾರಿ ಕಟ್ಟಡಗಳಲ್ಲಿ ನಿರ್ಬಂಧವನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುತ್ತದೆ. ಮುಖಕ್ಕೆ ಮುಸುಕು ಹಾಕಿಕೊಳ್ಳುವುದಕ್ಕೆ ಯುರೋಪ್ ನಾದ್ಯಂತ ವಿರೋಧ ವ್ಯಕ್ತವಾಗಿದೆ, ಫ್ರಾನ್ಸ್ 2011ರಲ್ಲಿ ಇದನ್ನು ವಿರೋಧಿಸಿ ಕಾನೂನು ಜಾರಿ ಮಾಡಿತ್ತು. ಬೆಲ್ಜಿಯಂ, ಬಲ್ಗೇರಿಯ, ಸ್ವಿಡ್ಜರ್ಲೆಂಡ್ ಕೂಡ ಇದನ್ನು ಅನುಸರಿಸಿವೆ. ಇದೀಗ ನಾಲ್ಕನೇ ಅವಧಿಗೆ ಜರ್ಮನ್ ಚಾನ್ಸಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಏಂಜೆಲಾ ಮಾರ್ಕೆಲ್ ಬುರ್ಖಾ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...