alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವ ಬೆದರಿಕೆಯಿಂದ ದೇಶವನ್ನೇ ತೊರೆದ ಗಾಯಕ

tahir-sha

ಕರಾಚಿ: ‘ಏಂಜೆಲ್’ ಖ್ಯಾತಿಯ ಪಾಕಿಸ್ತಾನಿ ಗಾಯಕ ತಾಹಿರ್ ಶಾ, ಜೀವ ಬೆದರಿಕೆ ಕಾರಣಕ್ಕೆ ದೇಶವನ್ನೇ ತೊರೆದಿದ್ದಾರೆ.

ತಾಹಿರ್ ಶಾ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಭದ್ರತೆ ಒದಗಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಸರ್ಕಾರ ಭದ್ರತೆ ಒದಗಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಅವರು ದೇಶ ತೊರೆಯುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

2013 ರಲ್ಲಿ ತಾಹಿರ್ ಶಾ ಅವರ ‘Eye to Eye’ ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಠಿಸಿತ್ತು. ಅವರಿಗೆ ಭಾರೀ ಅಭಿಮಾನಿಗಳಿದ್ದು, ದೇಶ ತೊರೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...