alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ತೆಯಾಗಿದೆ ಹಾವಿನ ತಲೆಯ ವಿಚಿತ್ರ ತಿಮಿಂಗಿಲ

ಜಗತ್ತಿನಲ್ಲಿ ಎಂತೆಂತಹ ಜೀವಿಗಳಿವೆಯೋ ಬಲ್ಲವರ್ಯಾರು? ಪೋರ್ಚುಗೀಸ್ ಸಮುದ್ರದಾಳದಲ್ಲಿ ಡೈನೋಸಾರ್ ಯುಗದ ಪ್ರಾಚೀನ ತಿಮಿಂಗಿಲ ಪತ್ತೆಯಾಗಿದೆ. ಹಾವಿನ ರೀತಿ ತಲೆಯನ್ನು ಹೊಂದಿರುವ ಈ ತಿಮಿಂಗಿಲಕ್ಕೆ ಬರೋಬ್ಬರಿ 300 ಹಲ್ಲುಗಳಿವೆ.

ಪೋರ್ಚುಗೀಸ್ ಕಡಲಿನ 710 ಅಡಿ ಆಳದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ಈ ವಿಚಿತ್ರ ಜೀವಿ ಕಂಡು ಬಂದಿದೆ. ಜೀವಂತ ಪಳೆಯುಳಿಕೆ ಇದಾಗಿದ್ದು, ಟೈರನ್ನೋಸಾರಸ್ ರೆಕ್ಸ್, ಟ್ರೈಸೆರಾಟೋಪ್ಸ್ ಗಳ ಕಾಲಕ್ಕೆ ಸೇರಿದ್ದಾಗಿದೆ.

ಇದರೊಂದಿಗಿನ ಜೀವಿಗಳು ಬಹಳ ಹಿಂದೆಯೇ ಕಾಲವಾಗಿವೆ. ಇದು ಸಮುದ್ರದಾಳದಲ್ಲಿ 710 ಅಡಿಗೂ ಹೆಚ್ಚಿನ ಆಳದಲ್ಲಿ ಜೀವಿಸಿದ್ದರಿಂದ 80 ಲಕ್ಷ ವರ್ಷಗಳಿಂದ ಇದರ ಸಂತತಿ ಉಳಿದುಕೊಂಡು ಬಂದಿರಬಹುದೆಂದು ಅಂದಾಜಿಸಲಾಗಿದೆ.

ವಾಣಿಜ್ಯ ಮೀನುಗಾರಿಕೆ ಮಾರ್ಗದ ಮೇಲಿನ ಒತ್ತಡ ಕಡಿಮೆ ಮಾಡಲು ಬದಲಿ ಮಾರ್ಗ ಕಂಡು ಹಿಡಿಯಲು ಸಮುದ್ರದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಗ್ರಹದ ಮೇಲಿನ ಅಪರೂಪದ ಮತ್ತು ಅತ್ಯಂತ ಪ್ರಾಚೀನ ಜೀವಿಯಾಗಿರುವ ಈ ಹಾವಿನ ತಲೆಯ ತಿಮಿಂಗಿಲ ಕಂಡು ಬಂದಿದೆ.

ಅಲ್ಗಾರ್ವೇ ಬಳಿ ಕಡಲಿನಾಳದಲ್ಲಿ ಈ ಜೀವಿ ಕಂಡು ಬಂದಿದ್ದು, ಅದನ್ನು ಅಧ್ಯಯನಕ್ಕೊಳಪಡಿಸಲಾಗಿದೆ. 300 ಹಲ್ಲುಗಳು ಇದಕ್ಕಿದ್ದು, 6 ಜತೆ ಶ್ವಾಸಾಂಗವನ್ನು ಹೊಂದಿದೆ.

Related News

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...