alex Certify
ಕನ್ನಡ ದುನಿಯಾ       Mobile App
       

Kannada Duniya

ಜೆರುಸಲೇಂನಲ್ಲಿ ಸಿಕ್ಕಿದೆ 2700 ವರ್ಷ ಹಳೆಯ ಮುದ್ರೆ

ಜೆರುಸಲೇಂನ ವೆಸ್ಟರ್ನ್ ವಾಲ್ ಎಂಬಲ್ಲಿ 2700 ವರ್ಷ ಹಳೆಯದಾದ ಮಣ್ಣಿನ ಮುದ್ರೆಯೊಂದು ಸಿಕ್ಕಿದೆ. ಆ ನಗರದ ಗವರ್ನರ್ ಗೆ ಸೇರಿದ ಮುದ್ರೆ ಇದು ಅಂತಾ ಹೇಳಲಾಗ್ತಿದೆ. ಕಳೆದ 5 ವರ್ಷಗಳಿಂದ ಇಲ್ಲಿ ಉತ್ಖನನ ನಡೆಸಲಾಗುತ್ತಿತ್ತು.

ಮುದ್ರೆಯ ಮೇಲೆ ಪ್ರಾಚೀನ ಹರ್ಬ್ಯೂ ಲಿಪಿ ಇದೆ. ನಗರದ ಗವರ್ನರ್ ಗೆ ಸೇರಿದ್ದು ಅಂತಾ ಬರೆಯಲಾಗಿದೆ. ಪುರಾತತ್ವಜ್ಞರು ಈ ಮುದ್ರೆಯನ್ನು ಜೆರುಸಲೇಂನ ಹಾಲಿ ಮೇಯರ್ ನಿರ್ ಬರ್ಕತ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

2700  ವರ್ಷಗಳ ಹಿಂದೆಯೇ ಜೆರುಸಲೇಂನಲ್ಲಿ ಗವರ್ನರ್ ಗಳಿದ್ರು ಎಂಬ ಬಗ್ಗೆ ಬೈಬಲ್ ನಲ್ಲೂ ಉಲ್ಲೇಖವಿದೆಯಂತೆ. ಗವರ್ನರ್ ದು ಸ್ಥಳೀಯ ಮಟ್ಟದಲ್ಲಿ ಆಗ ಉನ್ನತ ಹುದ್ದೆಯಾಗಿತ್ತು. ಇಬ್ಬರು ಪುರುಷರು ಮುಖಾಮುಖಿಯಾಗಿ ನಿಂತಿರುವ ಚಿತ್ರ ಮುದ್ರೆಯ ಮೇಲಿದೆ. ಇಬ್ಬರೂ ಮೊಣಕಾಲುದ್ದದ ಗೆರೆಗೆರೆ ಬಟ್ಟೆ ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...