alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನು ಎತ್ತಿಕೊಂಡು ಅತ್ಯಾಚಾರದ ಸುದ್ದಿ ಓದಿದ್ಲು ಆ್ಯಂಕರ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಏಳು ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಇದು ಇಡೀ ಪಾಕಿಸ್ತಾನಿಗಳ ಕ್ರೋಧಕ್ಕೆ ಕಾರಣವಾಗಿದೆ. ಅತ್ಯಾಚಾರದ ವಿರುದ್ಧ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಪಾಕಿಸ್ತಾನದ ಚಾನೆಲ್ ಒಂದರ ಆ್ಯಂಕರ್ ತನ್ನ ಮಗಳ ಜೊತೆ ಸುದ್ದಿ ಓದಿ ಎಲ್ಲರ ಕಣ್ಣು ತೇವವಾಗುವಂತೆ ಮಾಡಿದ್ದಾಳೆ.

ಆ್ಯಂಕರ್ ಕಿರಣ್ ನಾಝಾ ಹೆಣ್ಣು ಮಗಳನ್ನು ಎತ್ತಿಕೊಂಡು ರೇಪ್ ಸುದ್ದಿಯನ್ನು ಓದಿದ್ದಾಳೆ. ಈ ವೇಳೆ ಕಿರಣ್ ಕಣ್ಣೀರಿಟ್ಟಿದ್ದಾಳೆ. ಆರಂಭದಲ್ಲಿಯೇ ನಾನು ಇಂದು ಕಿರಣ್ ಆಗಿ ಬಂದಿಲ್ಲ. ಒಬ್ಬ ಅಮ್ಮನಾಗಿ ಸುದ್ದಿ ಓದುತ್ತಿದ್ದೇನೆ ಎಂದಿದ್ದಳು. ಪಾಕಿಸ್ತಾನ ನ್ಯಾಯಾಂಗ ವ್ಯವಸ್ಥೆ ಬಗ್ಗೆಯೂ ಕಿರಣ್ ಪ್ರಶ್ನೆ ಮಾಡಿದ್ದಾಳೆ.

ಹಿಂದಿನ ಗುರುವಾರ 7 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಮಂಗಳವಾರ ಮಗುವಿನ ಶವ ಕಸದಬುಟ್ಟಿಯಲ್ಲಿ ಸಿಕ್ಕಿದೆ. ಮೂರ್ನಾಲ್ಕು ದಿನಗಳ ಹಿಂದೆಯೇ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...