alex Certify
ಕನ್ನಡ ದುನಿಯಾ       Mobile App
       

Kannada Duniya

2286 ಕಿ.ಮೀ. ಈಜಿದ ವ್ಯಕ್ತಿ ಸ್ಥಿತಿ ಹೇಗಿದೆ?? ಇಲ್ಲಿದೆ ಡಿಟೇಲ್ಸ್

ಸಮುದ್ರದಲ್ಲಿ ಕೆಲ ಗಂಟೆಗಳ ಕಾಲ ಆಟವಾಡಿದರೆ ಅನೇಕರಿಗೆ ವಿವಿಧ ಸಮಸ್ಯೆ ಕಾಣಿಸುತ್ತದೆ. ಇನ್ನು ಸತತ 157 ದಿನಗಳ ಕಾಲ 2286 ಕಿ.ಮೀ. ಈಜಿದರೆ ದೇಹದ ಗತಿ ಏನಾಗಬೇಡ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ.

ಹೌದು, ಬ್ರಿಟನ್ ಮೂಲದ ರೋಸ್ ಎಡ್ವಿ ಎನ್ನುವ ಸಾಹಸಿ ಈ ಕಾರ್ಯಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾನೆ. ಈತ 157 ದಿನಗಳ ಕಾಲ ನೀರಿನಲ್ಲಿ ಈಜಿದ್ದರಿಂದ ಕಾಲಿನ ಬಣ್ಣವೇ ಬದಲಾಗಿದೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಅಗಿದೆ.

ಬ್ರಿಟನ್ ಸುತ್ತ ಸಮುದ್ರದಲ್ಲಿ ಈಜಿರುವ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರವಾಗಿರುವ ರೋಸ್, ಈ‌ ಸಾಹಸ ಕಾರ್ಯಕ್ಕೆ ಪ್ರತಿನಿತ್ಯ ಸರಾಸರಿ 40 ಸಾವಿರ ಬಾರಿ‌ ಸ್ಟ್ರೋಕ್ಸ್ ಮಾಡಿದ್ದರಂತೆ. ಜೂನ್ 1 ರಂದು ಮಾರ್ಗರೇಟ್ ಎನ್ನುವ ಸಮುದ್ರ ದಂಡೆಯಿಂದ ಆರಂಭಿಸಿ, 157 ದಿನದ ಬಳಿಕ ಅದೇ ಸ್ಥಳಕ್ಕೆ ಮರಳಿದ್ದಾರೆಂದು ವರದಿಯಾಗಿದೆ.

ಈ‌ ಸಾಧನೆ ಮಾಡಲು ಪ್ರತಿನಿತ್ಯ 10-15 ಸಾವಿರ ಕ್ಯಾಲರಿಯ ಶಕ್ತಿ ಅಗತ್ಯವಿದ್ದು, ಇದು 500 ಬಾಳೆಹಣ್ಣಿಗೆ‌ ಸಮ‌ ಎನ್ನಲಾಗಿದೆ‌. ಈಜುವ ವೇಳೆ ದೊಡ್ಡ ಅಲೆಗಳು, ಶೀತಲ ಗಾಳಿ ಹಾಗೂ ಜೆಲ್ಲಿ ಫಿಶ್ ಗಳಿಂದ ಕಷ್ಟ ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಈಜು ಸಾಹಸದ ಬಳಿಕ ಕಾಲಿನ ಫೋಟೋ ಅಪ್ಲೋಡ್ ಮಾಡಿದ್ದು, ಈ ಫೋಟೊಗೆ 1.5 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...