alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಾಟಕ್ಕಿದೆ ಇಡೀ ಗ್ರಾಮ: ಬೆಲೆ ಎಷ್ಟು ಗೊತ್ತಾ?

ಸಾಮಾನ್ಯವಾಗಿ ಅಂಗಡಿ, ಮನೆ, ನಿರ್ಧಿಷ್ಟ ಭೂಮಿ ಮಾರಾಟ ಮಾಡಲಾಗುತ್ತದೆ. ಆದ್ರೆ ಇಡೀ ಗ್ರಾಮವೇ ಇಲ್ಲಿ ಮಾರಾಟಕ್ಕಿದೆ. ಯಸ್, ನ್ಯೂಜಿಲ್ಯಾಂಡ್ ನ ಗ್ರಾಮವೊಂದು ವಿಶ್ವದ ಗಮನ ಸೆಳೆದಿದೆ. ಮೂರು ದಶಕಗಳಿಂದ ಖಾಲಿಯಿರುವ ಈ ಗ್ರಾಮವನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಗ್ರಾಮದ ಬೆಲೆ 2.8 ಮಿಲಿಯನ್ ಡಾಲರ್.

ಲೇಕ್ ವೆಟ್ಕಿ ಗ್ರಾಮ 1930 ರಲ್ಲಿ ನೆಲೆಗೊಂಡಿತ್ತು. ಈ ಗ್ರಾಮದ ಪಕ್ಕದಲ್ಲಿ ಆಣೆಕಟ್ಟು ಯೋಜನೆ ಕೆಲಸಕ್ಕೆ ಬಂದ ಕಾರ್ಮಿಕರು ಹಾಗೂ ಅವ್ರ ಕುಟುಂಬಸ್ಥರಿಗಾಗಿ ಈ ಜಾಗ ನೀಡಲಾಗಿತ್ತು. 1980 ರಲ್ಲಿ ಯೋಜನೆ ಬಂದ್ ಆದ್ಮೇಲೆ ಇಲ್ಲಿನ ಕಾರ್ಮಿಕರಿಗೆ ಕೆಲಸವಿಲ್ಲದ ಕಾರಣ ವಲಸೆ ಹೋದ್ರು. ಅಲ್ಲಿಂದ ಈ ಗ್ರಾಮ ಖಾಲಿಯಿದೆ.

ಲೇಕ್ ವೆಟ್ಕಿ ಗ್ರಾಮದ ಆಕಾರ ತುಂಬಾ ಸುಂದರವಾಗಿದೆ. ಎಂಟು ಮನೆ, ಒಂದು ರೆಸ್ಟೋರೆಂಟ್, ಒಂದು ಲಾಡ್ಜ್ ಹಾಗೂ ಕೆಲ ಕಾರ್ ಗ್ಯಾರೇಜ್ ಇದೆ. ಈ ಗ್ರಾಮ ಮಾರಾಟಕ್ಕಿದೆ ನಿಜ. ಆದ್ರೆ ನ್ಯೂಜಿಲ್ಯಾಂಡ್ ಕಾಯ್ದೆಯೊಂದು ವಿದೇಶಿಗರಿಗೆ ಸಂಕಷ್ಟ ತಂದಿದೆ. ಈ ಗ್ರಾಮವನ್ನು ವಿದೇಶಿಗರು ಖರೀದಿ ಮಾಡುವುದು ಸುಲಭವಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...