alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿಯ ಸಾವು ಕಂಡು ಆತ್ಮಹತ್ಯೆಗೆ ಶರಣಾದ ಪರ್ವತಾರೋಹಿ

ಮೊಂಟಾನಾ ಪೀಕ್ ನಲ್ಲಿ ಇಬ್ಬರು ಪರ್ವತಾರೋಹಿಗಳ ದುರಂತ ಅಂತ್ಯವಾಗಿದೆ. ದಿಢೀರ್ ಹಿಮಪಾತದಲ್ಲಿ ಸಿಕ್ಕು ಪ್ರೇಯಸಿ ಮೃತಪಟ್ಟಿರೋದನ್ನು ನೋಡಿ, ವಿಶ್ವದರ್ಜೆಯ ಪರ್ವತಾರೋಹಿ ಹೇಡೆನ್ ಕೆನಡಿ ಕೂಡ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

27 ವರ್ಷದ ಕೆನಡಿ ಮತ್ತವನ ಪ್ರೇಯಸಿ 23 ವರ್ಷದ ಇಗ್ನೆ ಪೆರ್ಕಿನ್ಸ್ ಜೊತೆಯಾಗಿ ಪರ್ವತಾರೋಹಣ ಮಾಡುತ್ತಿದ್ರು. ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿ ಪರ್ವತಯಾನ ಮಾಡುತ್ತಿದ್ರು. ಈ ವೇಳೆ ದಿಢೀರನೆ ಹಿಮಪಾತವಾಗಿದೆ. ಸುಮಾರು 150 ಅಡಿ ಎತ್ತರಕ್ಕೆ ಹಿಮ ಆವರಿಸಿಕೊಂಡಿದೆ.

ಅದರ ಅಡಿಯಲ್ಲಿ ಇಗ್ನೆ ಪೆರ್ಕಿನ್ಸ್ ಸಿಕ್ಕಿಹಾಕಿಕೊಂಡಿದ್ಲು. ಎಷ್ಟು ಪ್ರಯತ್ನಿಸಿದ್ರೂ ಕೆನಡಿಯಿಂದ ಆಕೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣೆದುರೇ ಪ್ರೇಯಸಿಯ ದಾರುಣ ಸಾವನ್ನು ಕಂಡು ಕೆನಡಿ ಚಲಿಸಿ ಹೋಗಿದ್ದ. ಆ ದುಖಃದಲ್ಲಿ ತಾನು ಕೂಡ ಹಿಮದಡಿ ಮಲಗಿ ಸಾವಿಗೆ ಶರಣಾಗಿದ್ದಾರೆ.

ಇಬ್ಬರು ಪರ್ವತಾರೋಹಿಗಳ ಶೋಧಕ್ಕಾಗಿ ಬಂದ ರಕ್ಷಣಾ ಪಡೆಗಳು ಮೊದಲು ಇಗ್ನೆ ಶವವನ್ನು ಪತ್ತೆ ಮಾಡಿದ್ರು. ಅದರ ಸನಿಹದಲ್ಲೇ ಕೇವಲ 3 ಅಡಿ ಆಳದಲ್ಲಿ ಕೆನಡಿ ಮೃತದೇಹ ಕೂಡ ಪತ್ತೆಯಾಗಿದೆ. ಕೆನಡಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆತನ ಪೋಷಕರು ದೃಢಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...