alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋಟೋದಲ್ಲಿರುವ ವ್ಯಕ್ತಿ ಯಾರು ಹೇಳಬಲ್ಲಿರಾ…?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರಾಜಸ್ತಾನದ ಜೋದ್ಪುರದಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಮಂಗಳವಾರ ಅಮಿತಾಬ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದ್ರೀಗ ಬಚ್ಚನ್ ಆರೋಗ್ಯ ಸುಧಾರಿಸಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್ ಫೋಟೋವೊಂದು ವೈರಲ್ ಆಗಿದೆ.

ಈ ಫೋಟೋದಲ್ಲಿರುವ ವ್ಯಕ್ತಿ ಅಮಿತಾಬ್ ಬಚ್ಚನ್ ಎನ್ನಲಾಗ್ತಿದೆ. ಥಗ್ಸ್ ಆಫ್ ಹಿಂದೂಸ್ತಾನ್ ನಲ್ಲಿ ಅಮಿತಾಬ್ ನಿರ್ವಹಿಸುತ್ತಿರುವ ಪಾತ್ರವಿದು ಎನ್ನಲಾಗ್ತಿದೆ. ಫೋಟೋದಲ್ಲಿರುವ ವ್ಯಕ್ತಿ ಅಮಿತಾಬ್ ರಂತೆಯೇ ಇದ್ದಾರೆ. ಮೊದಲ ಬಾರಿ ಫೋಟೋ ನೋಡಿದವರು ಮೋಸ ಹೋಗೋದು ನಿಶ್ಚಿತ. ಈ ಫೋಟೋಕ್ಕೆ ಅನೇಕ ಪ್ರತಿಕ್ರಿಯೆ ಬರ್ತಿದೆ.

ಆದ್ರೆ ಫೋಟೋದಲ್ಲಿರುವ ವ್ಯಕ್ತಿ ಅಮಿತಾಬ್ ಅಲ್ಲ. ಅಪಘಾನಿಸ್ತಾನದ ನಿರಾಶ್ರಿತ. ಸ್ವಿವ್ ಮ್ಯಾಕೆರಿ ಹೆಸರಿನಲ್ಲಿರುವ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಈ ಫೋಟೋಯಿದೆ. ಈ ಫೋಟೋದ ಬಗ್ಗೆ ವಿವರ ಕೂಡ ಇದೆ. ಈ ಫೋಟೋದಲ್ಲಿರುವ ವ್ಯಕ್ತಿ ಶಾಹಬಾಜ್ ನದ್ದು. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಈ ಫೋಟೋವನ್ನು 1981ರಲ್ಲಿ ತೆಗೆಯಲಾಗಿದೆ ಎಂದು ವಿವರ ನೀಡಲಾಗಿದೆ.

ನಿಶ್ಚಿತವಾಗಿ ಈ ಫೋಟೋ ಅಮಿತಾಬ್ ಬಚ್ಚನ್ ರದ್ದಲ್ಲ. ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಯಾವುದೇ ಫೋಟೋ ಅಥವಾ ಟ್ರೈಲರ್ ಇನ್ನೂ ಬಹಿರಂಗವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...