alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರೋರಾತ್ರಿ ನಡೆದಿದೆ ಚಮತ್ಕಾರ- ಮಹಿಳೆಯ ಭಾಷೆ ದಿಢೀರ್ ಬದಲು

ಮಿಚೆಲ್ ಮೈಯರ್ಸ್ ಅಮೆರಿಕದ ಅರಿಜೋನಾ ನಿವಾಸಿ. ಈವರೆಗೂ ಆಕೆ ಬೇರೆ ದೇಶಗಳಿಗೆ ಭೇಟಿ ನೀಡಿಲ್ಲ. ಆದ್ರೆ ದಿಢೀರ್ ಅಂತ ಅವಳ ಉಚ್ಛಾರಣೆ ಸಂಪೂರ್ಣ ಜಾಗತಿಕವಾಗಿಬಿಟ್ಟಿದೆ. ಇದಕ್ಕೆ ಕಾರಣ ರಾತ್ರಿ ಬೆಳಗಾಗುವಷ್ಟರಲ್ಲಿ ನಡೆದ ಚಮತ್ಕಾರ.

ಮಿಚೆಲ್ ಗೆ ವಿಪರೀತ ತಲೆನೋವು ಬಂದಿತ್ತಂತೆ. ಮಲಗಿ ನಿದ್ದೆ ಹೋಗಿದ್ದ ಮಿಚೆಲ್ ಬೆಳಗ್ಗೆ ಏಳುವಷ್ಟರಲ್ಲಿ ವಿದೇಶಿ ಉಚ್ಛಾರಣೆಯಲ್ಲಿ ಮಾತನಾಡಲು ಶುರು ಮಾಡಿದ್ಲು. ಬ್ರಿಟಿಷ್, ಐರಿಷ್ ಹಾಗೂ ಆಸ್ಟ್ರೇಲಿಯಾದ ಉಚ್ಛಾರಣೆ ಬಲು ಸುಲಭವಾಗಿ ಆಕೆಗೆ ಬಂದುಬಿಟ್ಟಿತ್ತು.

ಈ ಭಾಷೆಗಳೆಲ್ಲಿ ಮಿಚೆಲ್ 2 ವಾರ ಮಾತನಾಡಿದ್ದಾಳಂತೆ. ನಂತರ ಅವು ದಿಢೀರನೆ ಮಾಯವಾಗಿದ್ವು. ಆದ್ರೆ ಬ್ರಿಟಿಷ್ ಉಚ್ಛಾರಣೆ ಮಾತ್ರ ಹಾಗೆಯೇ ಉಳಿದಿದೆಯಂತೆ. ತನಗೆ ಫಾರಿನ್ ಆ್ಯಕ್ಸೆಂಟ್ ಸಿಂಡ್ರೋಮ್ ಇದೆ ಅನ್ನೋದು ಮಿಚೆಲ್ ಳ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...