alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ಟೀ ಮಾರಾಟ ಮಾಡಿ ಕೋಟ್ಯಾಧಿಪತಿಯಾದ ಮಹಿಳೆ

ಚಹಾ ದೇಶದ ಅಘೋಷಿತ ರಾಷ್ಟ್ರೀಯ ಪಾನೀಯ ಎಂದ್ರೆ ತಪ್ಪಾಗಲಾರದು. ಟೀ ಬಗ್ಗೆ ರಾಜಕೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ. ಟೀ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಯಶಸ್ವಿ ಕಥೆ. ಈ ಟೀ ವ್ಯಕ್ತಿಯೊಬ್ಬರನ್ನು ಕೋಟ್ಯಾಧಿಪತಿ ಮಾಡಬಹುದು ಎಂದ್ರೆ ನೀವು ನಂಬಲೇಬೇಕು.

ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಿ ಮಹಿಳೆಯೊಬ್ಬಳು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಆಕೆ ಟೀ ಮಾರಾಟ ಮಾಡಿದ್ದು ಭಾರತದಲ್ಲಲ್ಲ. ಅಮೆರಿಕಾದಲ್ಲಿ. ಯಸ್, ಅಮೆರಿಕಾದ ಬ್ರೂಕ್ ಎಡಿ ಈ ಸಾಧನೆ ಮಾಡಿದ್ದಾಳೆ. ಬ್ರೂಕ್ ಎಡಿ ಟೀ ಮಾರಾಟ ಮಾಡಿ 35 ಮಿಲಿಯನ್ ಡಾಲರ್ ಅಂದ್ರೆ 227 ಕೋಟಿ ರೂಪಾಯಿಯ ಮಾಲೀಕಳಾಗಿದ್ದಾಳೆ.

ಎಡಿಗೆ ಟೀ ಮಾರಾಟ ಮಾಡುವ ಐಡಿಯಾ ಬಂದಿದ್ದು ಭಾರತದಿಂದ. 2002 ರಲ್ಲಿ ಭಾರತಕ್ಕೆ ಬಂದಿದ್ದ ಎಡಿ ಭಾರತದ ಟೀಗೆ ಫಿದಾ ಆಗಿದ್ದಳು. ಅಮೆರಿಕಾಕ್ಕೆ ವಾಪಸ್ ಹೋದ ನಂತ್ರ ಭಾರತದಂತ ಟೀ ಎಡಿಗೆ ಸಿಗಲಿಲ್ಲ. ಇದ್ರಿಂದ ನಿರಾಸೆಯಾಗದ ಎಡಿ ತಾನೇ ಟೀ ಉದ್ಯಮಕ್ಕಿಳಿದ್ಲು. 2007ರಲ್ಲಿ ಭಕ್ತಿ ಟೀ ಹೆಸರಿನಲ್ಲಿ ಉದ್ಯಮ ಶುರು ಮಾಡಿದ್ಲು.

ಎಡಿ ಟೀ ಅಮೆರಿಕಾದಲ್ಲಿ ಪ್ರಸಿದ್ಧಿ ಪಡೆದಿದೆ. ಸದ್ಯ ಆನ್ಲೈನ್ ನಲ್ಲಿ ಭಕ್ತಿ ಟೀ ಪ್ರಚಾರ ಶುರು ಮಾಡಿದ್ದಾಳೆ ಎಡಿ. ಭಕ್ತಿ ಟೀಯಿಂದಾಗಿ ಅಮೆರಿಕಾದಲ್ಲಿ ಟೀ ಬೇಡಿಕೆ ಹೆಚ್ಚಾಗಿದೆ. ಸಿಂಗಲ್ ಮದರ್ ಎಡಿ 2014ರಲ್ಲಿ ಎಂಟರ್ಪ್ರೆನಿಯರ್ ನಿಯತಕಾಲಿಕೆಯ ಟಾಪ್ 5 ರ ಪಟ್ಟಿಯಲ್ಲಿ  ಹೆಸರು ಪಡೆದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...