alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚೆಯ ವಿಷ್ಯವಾದ್ಲು ಫೇಸ್ಬುಕ್ ಫ್ರೆಂಡ್ ಭೇಟಿಗೆ ಭಾರತಕ್ಕೆ ಬಂದ ವಿದೇಶಿ ಯುವತಿ

ಪಂಜಾಬಿನ ಅಮೃತಸರದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ವಿದೇಶಿ ಹುಡುಗಿಯೊಬ್ಬಳು ಫೇಸ್ಬುಕ್ ಫ್ರೆಂಡ್ ಭೇಟಿಗೆ ಅಮೃತಸರಕ್ಕೆ ಬಂದಿದ್ದಾಳೆ. ಆ ಕಡೆ ಯುವತಿ ಮನೆಯವರು ಫೇಸ್ಬುಕ್ ನಲ್ಲಿ ಯುವತಿ ನಾಪತ್ತೆಯಾಗಿದ್ದಾಳೆಂದು ಪೋಸ್ಟ್ ಹಾಕಿದ್ದಾರೆ. ಆಶ್ಚರ್ಯದ ವಿಚಾರವೆಂದ್ರೆ ನಾಪತ್ತೆಯಾಗಿದ್ದ ಯುವತಿಯನ್ನು ಅಮೃತಸರದ ಯುವಕನೊಬ್ಬ ಪತ್ತೆ ಹಚ್ಚಿದ್ದಾನೆ.

ಅಮೆರಿಕಾದ 22 ವರ್ಷದ ಯುವತಿ ವಿಟ್ನಿ ಹ್ಯಾರಿಸ್ ಮೇರಿಲ್ಯಾಂಡ್ ಜಿಮ್ ಒಂದರಲ್ಲಿ ಕೆಲಸ ಮಾಡ್ತಿದ್ದಾಳೆ. ಕೆಲ ತಿಂಗಳ ಹಿಂದೆ ಅಮೃತಸರದ ಪುಲ್ಕಿತ್ ಎಂಬಾತ ಫೇಸ್ಬುಕ್ ನಲ್ಲಿ ಸ್ನೇಹಿತನಾಗಿದ್ದ. ಫೇಸ್ಬುಕ್ ನಲ್ಲಿಯೇ ಇಬ್ಬರು ಆಪ್ತರಾಗಿದ್ದರು. ಹ್ಯಾರಿಸ್, ಪುಲ್ಕಿತ್ ಭೇಟಿಗೆಂದು ಅಮೃತಸರಕ್ಕೆ ಬಂದಿದ್ದಾಳೆ. ಈ ವಿಷ್ಯವನ್ನು ಪತ್ರದ ಮೂಲಕ ಮನೆಯವರಿಗೆ ತಿಳಿಸಿದ್ದಾಳಂತೆ.

ಆದ್ರೆ ಹ್ಯಾರಿಸ್ ಅಮೃತಸರ ತಲುಪುತ್ತಿದ್ದಂತೆ ಅಮೆರಿಕಾದಲ್ಲಿರುವ ಹ್ಯಾರಿಸ್ ಅಂಕಲ್ ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಹ್ಯಾರಿಸ್ ನಾಪತ್ತೆಯಾಗಿದ್ದಾಳೆ ಎಂದು ಬರೆದಿರುವ ಅಂಕಲ್, ಪೊಲೀಸ್ ನೆರವು ಕೇಳಿದ್ದಾರೆ. ಈ ಪೋಸ್ಟ್ ಅಮೃತಸರದ ಜೀವನ್ ಎಂಬಾತನ ಕಣ್ಣಿಗೆ ಬಿದ್ದಿದೆ. ಜೀವನ್, ದೆಹಲಿ ವಿಮಾನ ನಿಲ್ದಾಣದಲ್ಲಿ ಪುಲ್ಕಿತ್ ಜೊತೆ ಹ್ಯಾರಿಸ್ ನೋಡಿದ್ದನಂತೆ. ಹಾಗಾಗಿ ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ವಿಚಾರಣೆ ನಡೆಸಿದ ಪೊಲೀಸರು ಹ್ಯಾರಿಸ್ ತನ್ನಿಷ್ಟದಂತೆ ಇಲ್ಲಿಗೆ ಬಂದಿದ್ದಾಳೆ. ಮನೆಯವರ ಜೊತೆ ಮಾತನಾಡಿದ್ದಾಳೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...