alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆ ಝಲ್ಲೆನಿಸುತ್ತೆ ಮಕ್ಕಳನ್ನು ಕ್ಯಾಚ್ ಹಿಡಿಯೋ ಈ ದೃಶ್ಯ

ಜಾರ್ಜಿಯಾದಲ್ಲಿ ಎದೆ ಝಲ್ಲೆನಿಸುವಂಥ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಟ್ಟಡದ ಮೇಲಿಂದ ಕೆಳಕ್ಕೆ ಹಾಕಿದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕೆಳಗೆ ನಿಂತು ಕ್ಯಾಚ್ ಹಿಡಿದಿದ್ದಾನೆ.

ಅಪಾರ್ಟ್ಮೆಂಟ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬಂದಿದ್ರು. ಎಲ್ಲರನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆತರಲು ಕಾರ್ಯಾಚರಣೆ ಶುರು ಮಾಡಿದ್ರು. ಪೋಷಕರೇನೋ ಏಣಿ ಮೂಲಕ ಕೆಳಕ್ಕೆ ಇಳಿದು ಬರ್ತಾ ಇದ್ರು. ಆದ್ರೆ ಪುಟ್ಟ ಪುಟ್ಟ ಮಕ್ಕಳನ್ನು ಕೆಳಗಿಳಿಸೋದು ಹೇಗೆ ಅನ್ನೋ ಆತಂಕ ಅವರನ್ನು ಕಾಡ್ತಾ ಇತ್ತು.

ಮಕ್ಕಳನ್ನು ಒಬ್ಬೊಬ್ಬರಾಗಿ ಅಪಾರ್ಟ್ಮೆಂಟ್ ನ ಬಾಲ್ಕನಿಯಿಂದ ಕೆಳಕ್ಕೆ ಹಾಕುವಂತೆ ಅಗ್ನಿ ಶಾಮಕ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಕೆಳಗೆ ನಿಂತು ಫುಟ್ಬಾಲ್ ಹಿಡಿದಂತೆ ಮಕ್ಕಳನ್ನು ಕ್ಯಾಚ್ ಮಾಡಿ ಸೇಫಾಗಿ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಬೆಂಕಿ ಅನಾಹುತದಲ್ಲಿ 12 ಜನರು ಗಾಯಗೊಂಡಿದ್ದಾರೆ.

80ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಮಕ್ಕಳನ್ನು ಕೆಳಕ್ಕೆ ಹಾಕಿದಾಗ ಅಮ್ಮಂದಿರ ಮುಖದಲ್ಲಿ ಆತಂಕವಿತ್ತು. ಆದ್ರೆ ನಾವು ಆ ಬಗ್ಗೆ ಗಮನ ಕೊಡದೇ ಮಗುವನ್ನು ಸೇಫಾಗಿ ಕ್ಯಾಚ್ ಮಾಡುವ ಬಗ್ಗೆ ಮಾತ್ರ ಯೋಚಿಸುತ್ತಿದ್ದೆವು ಅಂತಾ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

DeKalb County Fire Captain Catches Child

New HD Video of Dekalb County Fire Rescue Department firefighters rescuing a dozen trapped occupants from an apartment with heavy fire involvement on arrival. Third generation DCFR firefighter Captain Scott Stroup can be seen catching one of the children that was dropped from the third floor balcony. Great job by all hands operating on this fire as several lifesaving grabs were made that night. STATter911.com

Posted by Local 1492 on Sunday, January 14, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...