alex Certify
ಕನ್ನಡ ದುನಿಯಾ       Mobile App
       

Kannada Duniya

ಅರಿಜೋನಾದ ವಾಯುಪ್ರದೇಶದಲ್ಲಿ ನಿಗೂಢ ವಸ್ತು ಗೋಚರ

ದಕ್ಷಿಣ ಅರಿಜೋನಾದಲ್ಲಿ ಇಬ್ಬರು ಪೈಲಟ್ ಗಳು ವಿಚಿತ್ರ ವಸ್ತುವೊಂದನ್ನು  ನೋಡಿರೋದಾಗಿ ಹೇಳಿದ್ದಾರೆ. ಭೂಮಿಯಿಂದ 40,000 ಅಡಿ ಎತ್ತರದಲ್ಲಿ ಅದು ಪತ್ತೆಯಾಗಿದ್ದು, ಅದರ ನೆರಳು ಬೃಹದಾಕಾರದಲ್ಲಿತ್ತು ಅಂತಾ ತಿಳಿಸಿದ್ದಾರೆ.

ಫೆಬ್ರವರಿ 24ರಂದು ಬೇರೆ ಬೇರೆ ವಿಮಾನದ ಈ ಇಬ್ಬರು ಪೈಲಟ್ ಗಳಿಗೆ ವಿಚಿತ್ರ ವಸ್ತು ಗೋಚರಿಸಿದೆಯಂತೆ. ಈ ಬಗ್ಗೆ ಲಿಯರ್ ಜೆಟ್ ನ ಪೈಲಟ್ ಅಲ್ಬುಕರ್ಕ್ ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್ ಗೂ ಮಾಹಿತಿ ನೀಡಿದ್ದರು.

ಅದು ವಿಮಾನವಂತೂ ಅಲ್ಲ ಅಂತಾ ಪೈಲಟ್ ಗಳು ಸ್ಪಷ್ಟಪಡಿಸಿದ್ದಾರೆ. ಯಾವುದೋ ವಸ್ತುವೊಂದು ವಿಮಾನವನ್ನು ಹಾದು ಹೋಗಿದೆ. ಆದ್ರೆ ಅದು ಏನು ಅನ್ನೋದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಅದು ಗೂಗಲ್ ಬಲೂನ್ ಇರಬಹುದಾ ಎಂದು ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ, ಪೈಲಟ್ ನನ್ನು ಪ್ರಶ್ನಿಸಿದ್ದಾರೆ.

ಆದ್ರೆ ಅದು ಗೂಗಲ್ ಬಲೂನ್ ಅಲ್ಲ ಎಂದಿದ್ದಾನೆ ಪೈಲಟ್. ಈ ಘಟನೆ ನಡೆದು 2 ತಿಂಗಳು ಕಳೆದರೂ ಆ ವಸ್ತು ಯಾವುದು ಅನ್ನೋದು ಪತ್ತೆಯಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...