alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಅರೆಸ್ಟ್

ಅಮೆರಿಕಾದ ಫ್ಲೋರಿಡಾದಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.  ಶಿಕ್ಷಕ ತನ್ನ ಮನೆ, ಶಾಲೆ ಹಾಗೂ ಮಲತಾಯಿ ಮನೆಯಲ್ಲಿ ಸಂಬಂಧ ಬೆಳೆಸಿದ್ದನಂತೆ.

30 ವರ್ಷದ ಕೊರೆ ಫ್ರೆಂಚ್ ಆರೋಪಿ ಶಿಕ್ಷಕ. ಈತ ವಿಜ್ಞಾನ ಶಿಕ್ಷಕನಾಗಿದ್ದಾನೆ. ಒಬ್ಬ ಪೀಡಿತ ವಿದ್ಯಾರ್ಥಿ ವಯಸ್ಸು 16. ಇನ್ನೊಬ್ಬಳ ವಯಸ್ಸು 17. ಶಿಕ್ಷಕನ ಪರ ವಕೀಲರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುಂದಿನ ತಿಂಗಳು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಕೊರೆ ತನ್ನ ಮೇಲೆ ಬಂದಿರುವ ಆರೋಪ ಸುಳ್ಳು ಎಂದಿದ್ದಾನೆಂದು ವಕೀಲರು ಹೇಳಿದ್ದಾರೆ.

ಘಟನೆ ನಂತ್ರ ವಿದ್ಯಾರ್ಥಿನಿಯರು ಆತನ ಪತ್ನಿಯನ್ನು ಸಂಪರ್ಕಿಸಿದ್ದರಂತೆ. ಸ್ಕ್ರೀನ್ ಶಾಟ್ ಹಾಗೂ ಫೋಟೋಗಳನ್ನು ಸಾಕ್ಷಿ ರೂಪದಲ್ಲಿ ನೀಡಿದ್ದರಂತೆ. ಫೋಟೋ ನೋಡಿದ ಆರೋಪಿ ಪತ್ನಿ ನಂತ್ರ ಪೊಲೀಸ್ ಹಾಗೂ ಶಾಲೆ ಆಡಳಿತ ಮಂಡಳಿಗೆ ದೂರು ನೀಡಿದ್ದಳಂತೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...