alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆ ನಶೆ ಔಷಧಿ ನೀಡಿ ಅಶ್ಲೀಲ ವಿಡಿಯೋ ಮಾಡ್ತಿದ್ರು ವೈದ್ಯ ಹಾಗೂ ಪ್ರೇಯಸಿ

ಕ್ಯಾಲಿಫೋರ್ನಿಯಾದ ಮೂಳೆ ತಜ್ಞ ಹಾಗೂ ಆತನ ಪ್ರೇಯಸಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ತಜ್ಞ ವೈದ್ಯ ಚಿಕಿತ್ಸೆಗೆ ಬಂದ ಮಹಿಳೆಯರಿಗೆ ನಶೆಯ ಔಷಧಿ ನೀಡಿ ಲೈಂಗಿಕ ಕಿರುಕುಳ ನೀಡಿದ್ದನಂತೆ. ಪೀಡಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 11ರಂದು ಪೊಲೀಸರು ಆರೋಪಿಗಳಾದ ಸರ್ಜನ್ ಗ್ರಾಂಟ್ ವಿಲಿಯಂ ರಾಬಿಚೆಕ್ಸ್ ಹಾಗೂ ಆತನ ಗೆಳತಿ ಸೆರಿಸಾ ಲೌರಾ ರಾಯಲಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಅಮೆರಿಕಾದ ಟಿವಿ ಶೋ ಆನ್ಲೈನ್ ಡೇಟಿಂಗ್ ಕಾರ್ಯಕ್ರಮದಲ್ಲಿ ವೈದ್ಯ ಹಾಗೂ ಆತನ ಪ್ರೇಯಸಿ ಪಾಲ್ಗೊಂಡಿದ್ದರಂತೆ. ಸೆಪ್ಟೆಂಬರ್ 25ರಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಆರೋಪಿ ಫೋನ್ ನಲ್ಲಿ ಅನೇಕ ಮಹಿಳೆಯರ ವಿಡಿಯೋ ಸಿಕ್ಕಿದೆ. ಕೆಲ ಮಹಿಳೆಯರು ವಿವಸ್ತ್ರವಾಗಿದ್ದರೆ ಮತ್ತೆ ಕೆಲ ಮಹಿಳೆಯರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದಾರೆ. ಬಾರ್ ಅಥವಾ ರೆಸ್ಟೋರೆಂಟ್ ನಲ್ಲಿ ಮಹಿಳೆಯರ ವಿಶ್ವಾಸ ಗಳಿಸುತ್ತಿದ್ದ ಜೋಡಿ ನಂತ್ರ ಅಶ್ಲೀಲ ವಿಡಿಯೋ ಮಾಡ್ತಿದ್ದರಂತೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳು ಪೀಡಿತ ಮಹಿಳೆಯರು ಮುಂದೆ ಬರುವಂತೆ ಕರೆ ನೀಡಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ನೂರಾರು ಕರೆಗಳು ಬಂದಿವೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...