alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದ ಮಗುವಿನ ಕೊಲೆ ಮಾಡಿ ತಾಯಿ ಹೇಳಿದ್ಲು ಐ ಆ್ಯಮ್ ಸಾರಿ

ಬ್ರಿಟನ್ ನ ಸೌತ್ ವೆಲ್ಸ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಾಲ್ಕು ವರ್ಷದ ಮಗುವನ್ನು ತಾಯಿ ಹತ್ಯೆ ಮಾಡಿದ್ದಾಳೆ. ಕಾರ್ಲಿ ಹ್ಯಾರಿಸ್, ಅಮೆಲಿಯಾ ಬ್ರೂಕಿ ಹೆಸರಿನ ನಾಲ್ಕು ವರ್ಷದ ಮಗಳನ್ನು ಕೊಲೆ ಮಾಡಿದ್ದಾಳೆ.

ಘಟನೆ ಸೌತ್ ವೇಲ್ಸ್ ನಲ್ಲಿ ಕಳೆದ ಶುಕ್ರವಾರ ನಡೆದಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿ ತಾಯಿಯನ್ನು ಬಂಧಿಸಿದ್ದಾರೆ. ಕೋರ್ಟ್ ಮುಂದೆ ಹಾಜರಾದ ವೇಳೆ ಕಾರ್ಲಿ ಐ ಆ್ಯಮ್ ಸಾರಿ ಎಂದು ಕೂಗಿಕೊಂಡಿದ್ದಾಳೆ. ಆದ್ರೆ ಕಾರ್ಲಿ ಮಗುವನ್ನು ಹತ್ಯೆ ಯಾಕೆ ಮಾಡಿದ್ದೇನೆ ಎಂಬ ಬಗ್ಗೆ ಬಾಯ್ಬಿಟ್ಟಿಲ್ಲ.

ಶುಕ್ರವಾರ ರಾತ್ರಿ 10.20ರ ವೇಳೆ ಕಾರ್ಲಿ ಮನೆಗೆ ಭೇಟಿ ಮಾಡಿದ ಅಧಿಕಾರಿಗಳಿಗೆ ಅಮೆಲಿಯಾ ಬ್ರೂಕಿ ಶವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಲಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿರುವ ಪೊಲೀಸರು ಕೊಲೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...