alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ನೌಕರರು ಬಿಚ್ಚಿಟ್ಟಿದ್ದಾರೆ ಕರಾಳ ಸತ್ಯ

ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ನ ಯುನೈಟೆಡ್ ಕಿಂಗ್ಡಂ ನೌಕರರು ತಾವು ಎಷ್ಟು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂಬ ಕರಾಳ ಸತ್ಯವನ್ನು ರಹಸ್ಯ ಕಾರ್ಯಾಚರಣೆ ನಡೆಸಿದ ಪತ್ರಕರ್ತರೊಬ್ಬರ ಮುಂದೆ ಬಿಚ್ಚಿಟ್ಟಿದ್ದಾರೆ.

ಯುನೈಟೆಡ್ ಕಿಂಗ್ಡಂ ನ ವಿವಿಧ ಪ್ರದೇಶಗಳಲ್ಲಿರುವ ಅಮೆಜಾನ್ ವೇರ್ ಹೌಸ್ ನಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ಈ ಪತ್ರಕರ್ತ ಸಂದರ್ಶಿಸಿದ್ದು, ತಮಗೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಟಾರ್ಗೆಟ್ ನೀಡುತ್ತಿರುವ ಕಾರಣ ಮೂತ್ರ ವಿಸರ್ಜನೆ ಮಾಡಲು ಸಮಯಾವಕಾಶವಿಲ್ಲದಂತಾಗಿದೆ. ಹೀಗಾಗಿ ತಾವುಗಳು ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಅನಾರೋಗ್ಯಕ್ಕೊಳಗಾದರೂ ರಜೆ ಪಡೆಯುವಂತಿಲ್ಲ. ಅಲ್ಲದೇ ಕೆಲಸದ ವೇಳೆ ನಿತ್ರಾಣಗೊಂಡು ರೆಸ್ಟ್ ರೂಮಿಗೆ ಹೋಗಬೇಕೆಂದರೂ ದೂರವಿರುವ ಕಾರಣ ಅಂತಹ ಪರಿಸ್ಥಿತಿಯಲ್ಲೂ ಅನಿವಾರ್ಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ. ಬಹಳಷ್ಟು ಮಂದಿ ತಮಗೆ ಬೇರೊಂದು ಕೆಲಸ ಸಿಕ್ಕರೆ ಇತ್ತ ತಿರುಗಿಯೂ ನೋಡುವುದಿಲ್ಲವೆಂದು ಹೇಳಿದ್ದಾರೆ.

ಈ ವಿಚಾರ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಅಮೆಜಾನ್ ಅಧಿಕಾರಿಗಳು, ನೌಕರರಿಗೆ ತಾವು ಎಲ್ಲ ರೀತಿಯ ಸೌಲಭ್ಯ ನೀಡುತ್ತಿದ್ದೇವೆ. ಕೆಲಸದ ವಿಚಾರದಲ್ಲಿ ಯಾವುದೇ ಒತ್ತಡ ಹೇರುತ್ತಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...