alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಯ್ತು ಸೆಕ್ಸಿ ಬುರ್ಕಾ ಜಾಹೀರಾತು

amazon-sexy-saudi-burka-costume-arab-costume-featuring-male-model-browned-up-shoe-polishಇ- ಕಾಮರ್ಸ್ ಕಂಪನಿ ಅಮೆಜಾನ್ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಅರಬ್ ಹಾಗೂ ಮುಸ್ಲಿಂ ಸಮುದಾಯ ಧರಿಸುವ ಬಟ್ಟೆಯನ್ನು ಮಾರಾಟ ಮಾಡಲು ಅಮೆಜಾನ್ ಯುಕೆ ಬಳಸಿರುವ ಫೋಟೋ ವಿವಾದಕ್ಕೆ ಕಾರಣವಾಗಿದೆ. ಫೋಟೋ ನೋಡಿದ ಜನರು ಅಮೆಜಾನ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗ್ರಾಹಕರ ಪ್ರತಿಕ್ರಿಯೆ ನೋಡಿದ ಅಮೆಜಾನ್ ತಕ್ಷಣ ಜಾಹೀರಾತನ್ನು ಕಿತ್ತೆಸೆದಿದೆ.

ಅರಬ್ ಸ್ಕಾರ್ಫ್ ಧರಿಸಿರುವ ವ್ಯಕ್ತಿ ಹಾಗೂ ಬುರ್ಕಾ ಧರಿಸಿರುವ ಮಾಡೆಲ್ ಫೋಟೋವನ್ನು ಹಾಕಲಾಗಿತ್ತು. ಇದರಲ್ಲಿ ಮಹಿಳೆಯ ಬುರ್ಕಾ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೆಕ್ಸಿ ಸೌದಿ ಬುರ್ಕಾ ಇಸ್ಲಾಮಿಕ್ ಕಾಸ್ಟ್ಯೂಮ್ ಎಂದು ಶೀರ್ಷಿಕೆ ನೀಡಲಾಗಿತ್ತು.

ಅಮೆಜಾನ್ ಹಾಕಿದ ಈ ಡ್ರೆಸ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಜನಾಂಗೀಯ ನಿಂದನೆ ಮಾಡಲಾಗ್ತಾ ಇದೆ ಎಂದು ಆರೋಪಿಸಲಾಗಿತ್ತು. ಕೆಲವರು ಭಾವನಾತ್ಮಕವಾಗಿ ಅವರ ನೋವನ್ನು ತೋಡಿಕೊಂಡಿದ್ದರು. ನೀವು ಯಾರೆ ಆಗಿರಲಿ. ಅಲ್ಲಾ ಮೇಲೆ ಭಯವಿರಲಿ. ಇದು ಜೋಕ್ ಅಲ್ಲ ಎಂದಿದ್ದರು. ವಿಷಯದ ಗಂಭೀರತೆ ಅರಿತ ಅಮೆಜಾನ್ ಯುಕೆ ಬಹುಬೇಗ ಅರ್ಥ ಮಾಡಿಕೊಂಡು ಜಾಹೀರಾತನ್ನು ಕಿತ್ತೆಸೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...