alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಬಳಿಯೂ ಇದೆಯಾ ಈ ಪವರ್ ಬ್ಯಾಂಕ್…?

ಅಮೆಜಾನ್ ಕಂಪನಿಯ ಸುಮಾರು 2.6 ಲಕ್ಷ ಪವರ್ ಬ್ಯಾಂಕ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆಯಲಾಗ್ತಿದೆ. ಪವರ್ ಬ್ಯಾಂಕ್ ನಲ್ಲಿ ಸಮಸ್ಯೆ ಇದ್ದು, ಬೆಂಕಿ ಹೊತ್ತಿಕೊಂಡ ಘಟನೆಗಳು ಕೂಡ ವರದಿಯಾಗಿದ್ದವು. ಅತಿಯಾಗಿ ಬಿಸಿಯಾಗುತ್ತಿರುವ ಬಗ್ಗೆ ಸಹ ಗ್ರಾಹಕರಿಂದ ದೂರು ಬಂದಿತ್ತು.

ಓವರ್ ಹೀಟಿಂಗ್ ಹಾಗೂ ಪವರ್ ಬ್ಯಾಂಕ್ ಸ್ಫೋಟವಾಗಿರುವ ಬಗ್ಗೆ ಅಮೆಜಾನ್ ಗೆ 53ಕ್ಕೆ ಹೆಚ್ಚು ದೂರುಗಳು ಬಂದಿದ್ದವು. ಹಾಗಾಗಿ ಅಮೆಜಾನ್ ಪವರ್ ಬ್ಯಾಂಕ್ ಗಳನ್ನು ಬಳಸದಂತೆ ಅಮೆರಿಕದ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗ ಸೂಚನೆ ನೀಡಿತ್ತು.

ಪವರ್ ಬ್ಯಾಂಕ್ ಖರೀದಿ ಮಾಡಿದ್ದ ಎಲ್ಲಾ ಗ್ರಾಹಕರಿಗೆ ಹಣ ವಾಪಸ್ ಕೊಡುವಂತೆ ಅಮೆಜಾನ್ ಕಂಪನಿಗೂ ಸೂಚಿಸಿತ್ತು. ಹಾಗಾಗಿ 2014ರ ಡಿಸೆಂಬರ್ ನಿಂದ 2017ರ ಜುಲೈವರೆಗೆ ಮಾರಾಟ ಮಾಡಿರುವ ಪವರ್ ಬ್ಯಾಂಕ್ ಗಳನ್ನೆಲ್ಲ ಅಮೆಜಾನ್ ಗ್ರಾಹಕರಿಂದ ವಾಪಸ್ ಪಡೆಯುತ್ತಿದೆ. ಈ ಚಾರ್ಜರ್ ಗಳ ಬೆಲೆ 585-2600 ರೂಪಾಯಿವರೆಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...