alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ನಿಂದ ಬಂದ ಬಾಟಲಿಯಲ್ಲಿ ತುಂಬಿತ್ತು ಮೂತ್ರ…!

ಅಮೆಜಾನ್ ತನ್ನ ಗ್ರಾಹಕರೊಬ್ಬರಿಗೆ ಮೂತ್ರ ತುಂಬಿದ ಬಾಟಲಿಯನ್ನು ಡೆಲಿವರಿ ಮಾಡಿದೆ. ಅಮೆಜಾನ್ ನಿಂದ ಬಂದಿದ್ದ ಪಾರ್ಸಲ್ ಗ್ರಾಹಕನ ಕೈಸೇರುವ ಮುನ್ನವೇ ಡ್ಯಾಮೇಜ್ ಆಗಿತ್ತು. ಚಾಲಕನೊಬ್ಬ ಅದನ್ನು ಹಸ್ತಾಂತರಿಸಿ ಹೋಗಿದ್ದ.

ಬಾಕ್ಸ್ ನಲ್ಲಿದ್ದ ಬಾಟಲಿ ತೆರೆದು ನೋಡಿದ ಗ್ರಾಹಕನಿಗೆ ಶಾಕ್. ಅದರೊಳಗೆ ಮೂತ್ರ ತುಂಬಲಾಗಿತ್ತು, ಗಬ್ಬು ವಾಸನೆ ಹೊಡೆಯುತ್ತಿತ್ತು. ಅದನ್ನು ನೋಡಿ ಅಸಹ್ಯಪಟ್ಟುಕೊಂಡ ಗ್ರಾಹಕ ಹತ್ತಾರು ಬಾರಿ ಕೈತೊಳೆದುಕೊಂಡಿದ್ದಾನೆ. ಈ ಬಗ್ಗೆ ಫೇಸ್ಬುಕ್ ಮೂಲಕ ಅಮೆಜಾನ್ ಗೆ ದೂರು ನೀಡಿದ್ದಾನೆ.

ಅದಕ್ಕೆ ಪ್ರತಿಕ್ರಿಯಿಸಿರೋ ಅಮೆಜಾನ್ ಗ್ರಾಹಕನ ಕ್ಷಮೆ ಕೇಳಿದೆ, ಪರಿಹಾರವಾಗಿ 150 ಪೌಂಡ್ ನ ವೋಚರ್ ನೀಡಿದೆ. ಈ ಬಗ್ಗೆ ತನಿಖೆ ನಡೆಸೋದಾಗಿಯೂ ಹೇಳಿದೆ. ಅಮೇಜಾನ್ ಸಿಬ್ಬಂದಿಯನ್ನು ದಿನಕ್ಕೆ 12 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆಯಂತೆ. ಹಿಂದೊಮ್ಮೆ ಮೂತ್ರ ವಿಸರ್ಜನೆಗೂ ಸಮಯವಿಲ್ಲದೇ ಡೆಲಿವರಿ ಸಿಬ್ಬಂದಿ, ಬಾಕ್ಸ್ ನೊಳಗೇ ಮೂತ್ರ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...