alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ಸ್ನೇಹಿತನನ್ನು ಅಪ್ಪಿ ಮುದ್ದಾಡಿದೆ ಚಿರತೆ…!

ನಾಯಿ ಮನುಷ್ಯನ ಬೆಸ್ಟ್ ಫ್ರೆಂಡ್ ಅನ್ನೋದನ್ನು ಎಲ್ಲರೂ ಒಪ್ತಾರೆ. ಅದೇ ರೀತಿ ಬೆಕ್ಕುಗಳು ಕೂಡ ಮನುಷ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿವೆ. ಆದ್ರೆ ಕ್ರೂರ ಕಾಡು ಪ್ರಾಣಿಗಳು ಮನುಷ್ಯರ ಜೊತೆ ಸ್ನೇಹದಿಂದಿರೋದು ತುಂಬಾನೇ ಅಪರೂಪ.

ಹುಲಿ, ಸಿಂಹದಂತಹ ಪ್ರಾಣಿಗಳಂತೂ ಮನುಷ್ಯರನ್ನು ತಿಂದು ಹಾಕಲು ಹೇಸುವುದಿಲ್ಲ. ಅಂಥದ್ರಲ್ಲಿ ಚಿರತೆಯೊಂದು ವ್ಯಕ್ತಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿರೋ ವಿಡಿಯೋ ಈಗ ವೈರಲ್ ಆಗಿದೆ. ಆ ಚಿರತೆಯ ಹೆಸರು ಗೇಬ್ರಿಯೆಲ್.

ಡಾಲ್ಫ್ ಸಿ ವೋಕರ್ ಈ ಚಿರತೆಯ ಅಚ್ಚುಮೆಚ್ಚಿನ ಸ್ನೇಹಿತ. ದಕ್ಷಿಣ ಆಫ್ರಿಕಾದಲ್ಲಿರೋ ಚೀತಾ ಎಕ್ಸ್ ಪೀರಿಯೆನ್ಸ್ ಬ್ರೀಡಿಂಗ್ ಸೆಂಟರ್ ನಲ್ಲಿದೆ ಈ ಚಿರತೆ. ಮೂರು ವರ್ಷಗಳ ನಂತರ ಡಾಲ್ಫ್ ಅಲ್ಲಿಗೆ ಬಂದಿದ್ದ. ಅವನನ್ನು ಖುಷಿಯಿಂದ ಸ್ವಾಗತಿಸಿದ ಚಿರತೆ, ಮುಖವನ್ನೆಲ್ಲ ನೆಕ್ಕಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ.

ಡಾಲ್ಫ್ ಒಬ್ಬ ಆ್ಯನಿಮಲ್ ಅಡ್ವೋಕೇಟ್. ಅಮೆರಿಕ ಮೂಲದವನು. ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದ. ಹಾಗಾಗಿ ಗೇಬ್ರಿಯಲ್ ಚಿರತೆ ಜೊತೆಗೆ ಅವನಿಗೆ ಸ್ನೇಹ ಬೆಳೆದಿತ್ತು. ಮೂರು ವರ್ಷಗಳ ನಂತರ ಬಂದ್ರೂ ಚಿರತೆ ಮಾತ್ರ ಅವನನ್ನು ಮರೆತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...