alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಡವಿಲ್ಲದ ಈ ಹೊಟೇಲ್ ಗೆ ಬಾರಿ ಬೇಡಿಕೆ

zero-star-hotel-in-s8

ಐಷಾರಾಮಿ ಸೌಲಭ್ಯಗಳಿರುವ ಹೊಟೇಲ್ ಗಳನ್ನು ಸಾಮಾನ್ಯವಾಗಿ ಜನರು ಇಷ್ಟಪಡ್ತಾರೆ. ಬೇರೆ ದೇಶಗಳಿಗೆ ಪ್ರವಾಸಕ್ಕೆ ಹೋಗುವ ಮಂದಿ ಎಷ್ಟೇ ಹಣ ತೆತ್ತಿಯಾದ್ರೂ ದೊಡ್ಡ ದೊಡ್ಡ ಹೊಟೇಲ್ ಗಳಲ್ಲಿ ಉಳಿದುಕೊಳ್ತಾರೆ. ಪ್ರವಾಸಿಗರನ್ನು ಸೆಳೆಯಲೆಂದೇ ಹೊಟೇಲ್ ಮಾಲೀಕರು ಹೊಟೇಲ್ ಸೌಂದರ್ಯ ಹೆಚ್ಚಿಸುವ ಜೊತೆಗೆ ಅನೇಕ ಆಫರ್ ಗಳನ್ನು ನೀಡ್ತಾರೆ. ಆದ್ರೆ ಸ್ವಿಜರ್ಲ್ಯಾಂಡ್ ನ ಹೊಟೇಲ್ ಒಂದಕ್ಕೆ ಕಟ್ಟಡವೇ ಇಲ್ಲ. ಆದ್ರೂ ಜನ ಅಲ್ಲಿಗೆ ಬರ್ತಾರೆ.

ಯಸ್. ಈ ಹೊಟೇಲ್ ಗೆ ಆಕಾಶವೇ ಛಾವಣಿ. ಬಯಲೇ ಹೊಟೇಲ್. ಈ ಹೊಟೇಲ್ ಗೆ ಕಟ್ಟಡವೇ ಇಲ್ಲ. ಪ್ರವಾಸಿಗರು ರೂಂ ಬದಲು ಬಯಲಿನಲ್ಲಿ ಮಲಗಬೇಕು.ಇದ್ರ ಹೆಸರು ಝೀರೋ ಸ್ಟಾರ್ ಹೊಟೇಲ್. ಇದು ಸ್ವಿಸ್ ಆಲ್ಪ್ಸ್ ಪರ್ವತದ ಮೇಲಿದೆ. ಸಮುದ್ರ ಮಟ್ಟದಿಂದ 6463 ಅಡಿ ಎತ್ತರದಲ್ಲಿರುವ ಈ ಹೊಟೇಲ್ ನಲ್ಲಿ ಒಂದು ರಾತ್ರಿ ತಂಗಬೇಕಾದಲ್ಲಿ 14 ಸಾವಿರ ರೂಪಾಯಿ ನೀಡಬೇಕು. ಹವಾಮಾನದಲ್ಲಿ ಏರುಪೇರಾದ್ರೆ ಹೊಟೇಲ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಲಾಗುತ್ತದೆ.

ಈ ಹೊಟೇಲ್ ನಲ್ಲಿ ಲೈಟ್, ಬೆಡ್ ಬಿಟ್ಟರೆ ಮತ್ತೇನು ಇಲ್ಲ. ಈ ಹೊಟೇಲ್ ನಲ್ಲಿ ವಾಶ್ರೂಮ್ ಕೂಡ ಇಲ್ಲ. ಪ್ರವಾಸಿಗರು 10 ನಿಮಿಷ ನಡೆದು ಸಾರ್ವಜನಿಕ ಶೌಚಾಲಯ ಬಳಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...