alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯಾಘಾತಕ್ಕೊಳಗಾದ್ರೂ ಸ್ವಯಂ ಚಿಕಿತ್ಸೆಯಿಂದ ಬದುಕಿದ್ದಾನೆ ಈತ

ಆಸ್ಟ್ರೇಲಿಯಾದ ಕುಗ್ರಾಮ ಅದು. ಅಲ್ಲಿರೊ ಪುಟ್ಟ ಕ್ಲಿನಿಕ್ ನಲ್ಲಿ 44 ವರ್ಷದ ನರ್ಸ್ ಒಬ್ಬನೇ ಇದ್ದ. ದಿಢೀರನೆ ಅವನಿಗೆ ಎದೆನೋವು ಶುರುವಾಗಿತ್ತು. ಇದು ಹೃದಯಾಘಾತದ ಲಕ್ಷಣ ಅನ್ನೋದು ಅವನಿಗೆ ಖಚಿತವಾಗಿತ್ತು. ಆದ್ರೆ ಸಹಾಯ ಮಾಡಲು ಯಾರೂ ಜೊತೆಗಿಲ್ಲ.

ಒಬ್ಬಂಟಿಯಾಗಿದ್ದಿದ್ದರಿಂದ ತನಗೆ ತಾನೇ ಚಿಕಿತ್ಸೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಇನ್ನೊಂದು ಆಸ್ಪತ್ರೆಗೆ ತೆರಳಬೇಕು ಅಂದ್ರೆ ಅಲ್ಲಿಂದ 90 ಕಿಮೀ ದೂರದಲ್ಲಿತ್ತು. ಕೊನೆಗೆ ಆತ ತನಗೆ ತಾನೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಅಳವಡಿಸಿಕೊಂಡು ಪರಿಶೀಲಿಸಿದ.

ಸಂಪೂರ್ಣ ಹಾರ್ಟ್ ಬ್ಲಾಕ್ ಆಗಿರೋದು ಅದರಲ್ಲಿ ಗೋಚರಿಸಿತ್ತು. ಕೂಡಲೇ ಎಮರ್ಜೆನ್ಸಿ ಟೆಲಿಹೆಲ್ತ್ ಸರ್ವೀಸ್ ಮೊರೆಹೋದ ಆತ, ಫಿಸಿಶಿಯನ್ ಒಬ್ಬರ ಜೊತೆಗೆ ವಿಡಿಯೋ ಚಾಟ್ ಮಾಡಿದ, ತನ್ನ ಪರಿಸ್ಥಿತಿಯನ್ನು ವೈದ್ಯರಿಗೆ ವಿವರಿಸಿದ.

ಅಸ್ಪಿರಿನ್, ಬ್ಲಡ್ ಥಿನ್ನರ್, ಪೇಯ್ನ್ ಕಿಲ್ಲರ್ ಹಾಗೂ ಹೆಪ್ಪುಗಟ್ಟಿದ್ದ ರಕ್ತವನ್ನು ಸಡಿಲಿಸುವ ಮಾತ್ರೆಯನ್ನು ತೆಗೆದುಕೊಂಡ. ಕ್ಲಾಟ್ ಬಸ್ಟಿಂಗ್ ಔಷಧ ವರ್ಕೌಟ್ ಆಗಿತ್ತು. ಹೃದಯಾಘಾತವಾದ್ರೂ ನರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದ. ಮರುದಿನ ಆತನನ್ನು ಪರ್ತ್ ಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...