alex Certify
ಕನ್ನಡ ದುನಿಯಾ       Mobile App
       

Kannada Duniya

ಏಲಿಯೆನ್ಸ್ ಬಗ್ಗೆ ಹೊಸ ವಿಷಯ ತೆರೆದಿಟ್ಟ ವಿಜ್ಞಾನಿಗಳು

alien-1

ಸದ್ಯ ಏಲಿಯೆನ್ಸ್ ಸುದ್ದಿಯಲ್ಲಿದೆ. ಏಲಿಯನ್ಸ್ ಅಲ್ಲಿ ಕಾಣಿಸಿಕೊಂಡಿದೆ, ಇಲ್ಲಿ ಕಾಣಿಸಿಕೊಂಡಿದೆ ಎಂಬ ಸುದ್ದಿಗಳು ಆಗಾಗ ಕೇಳಿ ಬರ್ತಾ ಇವೆ. ಇದ್ರ ಬಗ್ಗೆ ಜನರಿಗೆ ಸಿಕ್ಕಾಪಟ್ಟೆ ಕುತೂಹಲ ಕೂಡ ಇದೆ. ಈ ನಡುವೆ ಏಲಿಯೆನ್ಸ್ ಪ್ರಿಯರಿಗೆ ವಿಜ್ಞಾನಿಗಳೊಂದು ಬಿಸಿ ಬಿಸಿ ಸುದ್ದಿ ನೀಡಿದ್ದಾರೆ.

ಇಂಗ್ಲೆಂಡ್ ನ ಕೆಲ ವಿಜ್ಞಾನಿಗಳು ಏಲಿಯೆನ್ಸ್ ಬಗ್ಗೆ ಕೆಲ ವಿಷಯಗಳನ್ನು ತೆರೆದಿಟ್ಟಿದ್ದಾರೆ. ಏಲಿಯೆನ್ಸ್ ಭೂಮಿಯಿಂದ 30 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತವೆಯಂತೆ. ಅಂತರಿಕ್ಷದ ಮನೆಯಲ್ಲಿ ಅವು ವಾಸ ಮಾಡುತ್ತಿವೆಯಂತೆ. ಯುನಿವರ್ಸಿಟಿ ಆಫ್ ಶೆಫೀಲ್ಡ್ ಮತ್ತು ಬಕಿಂಗ್ಹ್ಯಾಮ್ ವಿವಿ ಕೇಂದ್ರದ ಆಸ್ಟ್ರೋಬಯಲಾಜಿ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

ಸಂಶೋಧನೆಯಲ್ಲಿ ಒಂದು ಮಹತ್ವದ ವಿಷಯ ತಿಳಿದು ಬಂದಿದೆ. ಭೂಮಿಯಿಂದ ಕೆಲ ಕಿಲೋಮೀಟರ್ ದೂರದಲ್ಲಿ ಉಸಿರಿನ ಗಾಳಿಯೊಂದು ಕಾಣಸಿಕ್ಕಿದೆ. ಇದು ಮನುಷ್ಯನ ಉಸಿರಿನ ರೀತಿಯಲ್ಲಿಯೇ ಇದೆ. ಭೂಮಿ ಮೇಲೆ ಸಿಗುವ ಗಾಳಿಯನ್ನು ಅದು ಹೋಲುತ್ತದೆಯಂತೆ. ಇದನ್ನು ಏಲಿಯೆನ್ಸ್ ಬಾಹ್ಯಾಕಾಶಕ್ಕೆ ಹಾರಿ ಬಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಬಾಹ್ಯಾಕಾಶದಲ್ಲಿಯೇ ಏಲಿಯೆನ್ಸ್ ಇದ್ದು, ಅವು ಅಲ್ಲಿ ಇಲ್ಲಿ ತಿರುಗಾಡ್ತಾ ಇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ರಷ್ಯಾ ಮತ್ತು ಯುರೋಪಿನ ಬಾಹ್ಯಾಕಾಶ ಪ್ರತಿನಿಧಿಗಳು ಮಂಗಳನ ಅಧ್ಯಯನಕ್ಕೆ ಮಿಷನ್ ಒಂದನ್ನು ಕಳುಹಿಸುತ್ತಿದ್ದಾರೆ. ಅದು ಸುತ್ತ ಮುತ್ತಲ ಗ್ರಹದಲ್ಲಿರುವ ಪ್ರಾಣಿಗಳ ಬಗ್ಗೆಯೂ ಮಾಹಿತಿ ರವಾನಿಸಲಿದ. ಈ ವೇಳೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...