alex Certify
ಕನ್ನಡ ದುನಿಯಾ       Mobile App
       

Kannada Duniya

ಏಲಿಯನ್ ಗಳ ಮನೆಯಾಗಿತ್ತೇ ಚಂದ್ರ? ಬಾಹ್ಯಾಕಾಶ ವಿಜ್ಞಾನಿಗಳು ಹೇಳೋದೇನು…?

ಭೂಮಿಯ ಉಪಗ್ರಹವಾಗಿರುವ ಚಂದ್ರ ಒಂದು ಕಾಲದಲ್ಲಿ ಏಲಿಯನ್ ಗಳ ಮನೆಯಾಗಿದ್ದ ಸಾಧ್ಯತೆಗಳೇ ಹೆಚ್ಚಿದೆ ಅಂತ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಭೂಮ್ಯಾತೀಯ ಜೀವನದ ಬಗ್ಗೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಅನಾವರಣಗೊಳ್ಳೋದಕ್ಕೆ ಬಾಹ್ಯಾಕಾಶ ವಿಜ್ಞಾನಿಗಳು ಕಾರಣರಾಗಿದ್ದಾರೆ.

ಇಂಗ್ಲೆಂಡ್ ನ ಇಬ್ಬರು ವ್ಯೋಮ ವಿಜ್ಞಾನಿಗಳ ಪ್ರಕಾರ ಚಂದ್ರನಲ್ಲಿ ಹಲವು ಮಿಲಿಯನ್ ವರ್ಷಗಳ ಹಿಂದೆ ಸಾಮಾನ್ಯ ಜೀವಿಗಳು ಬದುಕೋಕೆ ಸಾಧ್ಯವಾಗುವಂತಾ ವಾತಾವರಣವಿತ್ತು. ಸುಮಾರು 3.5 ಬಿಲಿಯನ್ ವರ್ಷಗಳ ಹಿಂದೆ ಚಂದ್ರನ ವಾತಾವರಣದಲ್ಲಿ ಜ್ವಾಲಾಮುಖಿ ಮತ್ತು ಬಿರುಗಾಳಿ ಕಾಣಿಸಿಕೊಂಡಿತ್ತಂತೆ.

ಇದರಿಂದಾಗಿ ಚಂದ್ರನಲ್ಲಿ ಬಿಸಿ ಗಾಳಿ ಕಾಣಿಸಿಕೊಂಡ ಪರಿಣಾಮ ಚಂದ್ರನಲ್ಲಿದ್ದ ನೀರಿನ ಸೆಲೆ ಆವಿಯಾಗಿಬಿಟ್ಟಿದೆಯಂತೆ. ಆನಂತರ ಈ ಆವಿಯೇ ಚಂದ್ರನ ಕಕ್ಷೆಯಲ್ಲಿ ಘನರೂಪದ ನೀರಾಗಿ ಶೇಖರಣೆಯಾಗಿದೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಸದ್ಯ ಚಂದ್ರನ ವಾತಾವರಣದಲ್ಲಿ ಕಾಂತೀಯ ಶಕ್ತಿಗಳಾಗಿರೋದು ಏಲಿಯನ್ ಗಳಿಗೆ ಅನುಕೂಲಕರವಾಗಿರುವ ಭಯಾನಕ ಸೌರ ಮಾರುತಗಳಂತೆ. ಹಾಗಾಗಿ ವಿಜ್ಞಾನಿಗಳು ಕೋಟ್ಯಾಂತರ ವರ್ಷಗಳ ಹಿಂದಿನಿಂದಲೂ ಚಂದ್ರ ಏಲಿಯನ್ ಗಳ ವಾಸಸ್ಥಾನ ಆಗಿರಬಹುದು ಅನ್ನೋದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಈ ಅಧ್ಯಯನ ನಾಸಾ ಸೇರಿದಂತೆ ಇತರೆ ಬಾಹ್ಯಾಕಾಶ ಸಂಸ್ಥೆಗಳ ಗಮನ ಸೆಳೆದಿದ್ದು, ಈ ಬಗ್ಗೆ ಇನ್ನಷ್ಟು ಹೆಚ್ಚಿನ ಅಧ್ಯಯನ ನಡೆಸೋದಕ್ಕೆ ವ್ಯೋಮ ವಿಜ್ಞಾನಿಗಳ ಒಕ್ಕೂಟ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...