alex Certify
ಕನ್ನಡ ದುನಿಯಾ       Mobile App
       

Kannada Duniya

ಏಲಿಯನ್ಸ್ ಜೊತೆ ಸಂಬಂಧ ಬೆಳೆಸಿದ್ದಾರಂತೆ ಈ ಮಹಿಳೆಯರು..!

alien-baby

ಏಲಿಯೆನ್ಸ್ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದ್ರೆ ಅಮೆರಿಕಾದ ಇಬ್ಬರು ಮಹಿಳೆಯರು ಮಾತ್ರ ಆಶ್ಚರ್ಯಕರ ಸಂಗತಿಯೊಂದನ್ನು ಹೇಳಿದ್ದಾರೆ. ಏಲಿಯೆನ್ಸ್ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಲ್ಲದೆ, 13 ಮಕ್ಕಳಿಗೆ ಜನ್ಮ ನೀಡಿರುವುದಾಗಿ ಮಹಿಳೆಯರು ಹೇಳಿದ್ದಾರೆ.

ವರದಿಯೊಂದರ ಪ್ರಕಾರ ಲಾಸ್ ಏಂಜಲೀಸ್ ನಲ್ಲಿ ವಾಸಿಸುವ ಬ್ರಿಗೆಟ್ ನೀಲ್ಸನ್ ಅರಿಜೋವಾ ಹಾಗೂ ಎಲುನಾ ವರ್ಸೆ ಎಂಬ ಹೆಸರಿನ ಇಬ್ಬರು ಮಹಿಳೆಯರು ಏಲಿಯನ್ಸ್ ಜೊತೆ ಸಂಬಂಧ ಬೆಳೆಸಿದವರು. ಏಲಿಯೆನ್ಸ್ ಜೊತೆ ಸಂಬಂಧ ಬೆಳೆಸಿರುವ ಬಗ್ಗೆ ಮಾತನಾಡಿದ ಮಹಿಳೆಯರು ಅವರ ಜೊತೆ ಶಾರೀರಿಕ ಸಂಬಂಧ ಬೆಳೆಸಿರುವುದು ಅತ್ಯುತ್ತಮ ಅನುಭವ ಎಂದಿದ್ದಾರೆ.alienbabies_land3

ನೀಲ್ಸನ್ ಹಾಗೂ ಎಲುನಾ ಹೈಬ್ರಿಡ್ ಬೇಬಿ ಸಮುದಾಯದ ಸದಸ್ಯರಾಗಿದ್ದಾರೆ. ತಮ್ಮ ಮಕ್ಕಳು ಬಾಹ್ಯಾಕಾಶದಲ್ಲಿ ಏಲಿಯನ್ಸ್ ಜೊತೆ ಬದುಕುತ್ತಿದ್ದಾರೆಂಬ ನಂಬಿಕೆ ಅವರದ್ದು. ತಂದೆಯ ಜೊತೆ ವಾಸಿಸುವ ಅವರು ಏಲಿಯೆನ್ಸ್ ಜೊತೆ ಸಂಪರ್ಕ ಬೆಳೆಸುತ್ತಾರಂತೆ. ಇಬ್ಬರು ಮಹಿಳೆಯರು  ತಮ್ಮ ಮಕ್ಕಳ ಚಿತ್ರವನ್ನೂ ಬಿಡಿಸಿದ್ದಾರೆ. ಮನುಷ್ಯರನ್ನು ಹೋಲುವ ಚಿತ್ರದಲ್ಲಿ ಕಣ್ಣು ಕಪ್ಪಗಿದ್ದು, ಬಹಳ ದೊಡ್ಡದಾಗಿದೆ. ಇದನ್ನು ಬಿಟ್ಟರೆ ಏಲಿಯೆನ್ಸ್ ಜೊತೆ ಸಂಬಂಧ ಬೆಳೆಸಿರುವ ಬಗ್ಗೆ ಮಹಿಳೆಯರು ಬೇರೆ ಯಾವ ಸಾಕ್ಷಿಯನ್ನೂ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...