alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಅನ್ಯಗ್ರಹ ಜೀವಿಗಳ ಕುರಿತ ಕುತೂಹಲಕಾರಿ ಸುದ್ದಿ

ಭೂಮಿಯಾಚೆಗಿರುವ ಬದುಕಿನ ಬಗ್ಗೆ ತಿಳಿದುಕೊಳ್ಳಲು ಮನುಷ್ಯ ಹಲವು ವರ್ಷಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದಾನೆ. ಕೆಲವೊಮ್ಮೆ ಅನ್ಯಗ್ರಹಗಳು ಜೀವಿಗಳು ಕಾಣಿಸಿಕೊಂಡಿದೆ ಎನ್ನುವ ಮಾತನ್ನು ಹೇಳಲಾಗಿದೆ. ಆದರೆ ಇದೀಗ ನಮ್ಮ ಗ್ಯಾಲಕ್ಸಿಯನ್ನು ಮೀರಿದ ಅನ್ಯಗ್ರಹ ಮಂಡಲದಲ್ಲಿ ಏಲಿಯನ್ ಗಳಿವೆ ಎನ್ನುವ ವಾದಕ್ಕೆ ಪುರಾವೆ ಸಿಗಲಾರಂಭಿಸಿದೆ.

ಅನ್ಯಗ್ರಹ ಜೀವಿಗಳ ಪತ್ತೆಗೆಂದು ಇರುವ ಸಂಶೋಧನಾ ಘಟಕದ ವಿಜ್ಞಾನಿಗಳು ಸಂಶೋಧನೆಗೆಂದು ರೆಡಿಯೋ ಸಿಗ್ನಲ್ ಬಳಸುವ ವೇಳೆ, ಸುಮಾರು 72 ನಿಗೂಢ ಸಂದೇಶಗಳು ಬಂದಿವೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಅನ್ಯಗ್ರಹ ಜೀವಿಗಳ ಬಗ್ಗೆ ಸಂಶೋಧನೆಗೆಂದು‌ 400 ಟಿಬಿ ರೆಡಿಯೋ‌ ಡೇಟಾವನ್ನು ಪರಿಶೀಲಿಸುವಾಗ, ಸುಮಾರು ಮೂರು ಬಿಲಿಯನ್ ಜ್ಯೋತಿರ್ವರ್ಷದ ದೂರದ ಇನ್ನೊಂದು‌ ಚಿಕ್ಕ ಗ್ಯಾಲಕ್ಸಿಯಿಂದ, ಈ ಸಂದೇಶಗಳು ರವಾನೆಯಾಗಿದೆ ಎನ್ನಲಾಗಿದೆ.

72 ನಿಗೂಢ ಸಿಗ್ನಲ್ ಗಳಲ್ಲಿ ಬಹುತೇಕ ಎಲ್ಲ ಸಿಗ್ನಲ್ ಗಳು, ಕೃತಕ ಬುದ್ಧಿವಂತಿಕೆ (ಆರ್ಟಿಫಿಷಿಯನ್ ಇಂಟಲಿಜೆನ್ಸ್) ಸಂಬಂಧಿಸಿದಂತೆ ರವಾನೆಯಾಗಿರುವ ಸಿಗ್ನಲ್ ಗಳು ಎಂದು ಹೇಳಲಾಗಿದೆ. ಪ್ರಮುಖವಾಗಿ ಆಟೋಮ್ಯಾಟಿಕ್ ಡೇಟಾ ಅನಾಲಿಸಿಸ್ ಹಾಗೂ ದೊಡ್ಡ ಪ್ರಮಾಣದ ಡೇಟಾವನ್ನು ಒಗ್ಗೂಡಿಸಿರುವ ಬಗ್ಗೆ ಸಂದೇಶಗಳಿವೆ. ಇವೆಲ್ಲವೂ ನಿಗೂಢವಾಗಿವೆ ಇದೆ ಎಂದಿದ್ದಾರೆ.

ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪ್ರಕಾರ, ಈ ಸಿಗ್ನಲ್ ಬರುತ್ತಿರುವುದು ಯಾವ ವಸ್ತುವಿನಿಂದ ಎನ್ನುವುದು ಈಗಲೂ ನಿಗೂಢ. ಇದರಲ್ಲಿನ ಕೆಲವು‌ ಮಾಹಿತಿ, ಅನ್ಯಗ್ರಹ ಜೀವಿಗಳು ಅಭಿವೃದ್ಧಿಪಡಿಸಿರುವ ಪ್ರಯೋಗಗಳಾಗಿರಬಹುದು ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...