alex Certify
ಕನ್ನಡ ದುನಿಯಾ       Mobile App
       

Kannada Duniya

ಹಠಾತ್ ನಿವೃತ್ತಿ ಘೋಷಿಸಿದ ಆಲಿಬಾಬಾ ಸಂಸ್ಥಾಪಕ

ಚೀನಾದ ಇ-ಕಾಮರ್ಸ್ ದೈತ್ಯ ಆಲಿಬಾಬಾ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಹಾಗೂ ಸಹ ಸಂಸ್ಥಾಪಕ, 54 ವರ್ಷದ ಜ್ಯಾಕ್ ಮಾ ಹಠಾತ್ ಆಗಿ ನಿವೃತ್ತಿ ಘೋಷಿಸಿದ್ದಾರೆ.

ಆದರೆ ಇನ್ನೂ ನಿವೃತ್ತಿಯ ಅಧಿಕೃತ ದಿನಾಂಕ ಪ್ರಕಟಿಸಿಲ್ಲ, ಶೀಘ್ರದಲ್ಲೇ ಹೇಳುವುದಾಗಿ ಹೇಳಿದ್ದಾರೆ.

ತಮ್ಮ ಮುಂದಿನ ಜೀವನವನ್ನು ಶಿಕ್ಷಣ ಕ್ಷೇತ್ರಕ್ಕೆ ಮುಡಿಪಾಗಿಡಲು ಅವರು ತೀರ್ಮಾನಿಸಿದ್ದಾರೆ. 2014ರಲ್ಲಿ ಅವರು ಜ್ಯಾಕ್ ಮಾ ಫೌಂಡೇಶನ್ ಸ್ಥಾಪಿಸಿದ್ದು, ಅದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ.

ಮೂಲತಃ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಜ್ಯಾಕ್‌ ಮಾ ಅವರು 1999ರಲ್ಲಿ ಆಲಿಬಾಬಾ ಹೆಸರಲ್ಲಿ ಇ-ಕಾಮರ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆಲಿಬಾಬಾ ಚೀನಾದ ಅತಿದೊಡ್ಡ ತಂತ್ರಜ್ಞಾನ ಸಂಘಟಿತ ಸಂಸ್ಥೆಯಾಗಿದ್ದು ಮಾತ್ರವಲ್ಲ, ಮಾ ಚೀನಾದ ಅತಿ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿದ್ದಾರೆ.

ಆಲಿಬಾಬಾದ ಮಾತೃಸಂಸ್ಥೆ ಇ-ಕಾಮರ್ಸ್, ಆನ್‌ಲೈನ್ ಪಾವತಿ, ಬ್ಯಾಂಕಿಂಗ್, ಮನರಂಜನೆ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಉದ್ಯಮವನ್ನು ಹೊಂದಿದೆ. ಜತೆಗೆ ಮೈಕ್ರೋಬ್ಲಾಗಿಂಗ್ ಸೈಟ್ ವಯೆಬೋ ಸಹಿತ ಅನೇಕ ಚೀನಾದ ಮಾಧ್ಯಮ ಸಂಸ್ಥೆಗಳಲ್ಲಿ ಪಾಲು ಹೊಂದಿದೆ.

ಆಲಿಬಾಬಾ ಕಳೆದ ವರ್ಷ ಸುಮಾರು 40 ಬಿಲಿಯನ್ ಡಾಲರ್‌ನಷ್ಟು ಆದಾಯ ಹೊಂದಿತ್ತು. ಇತ್ತೀಚಿನ ತ್ರೈಮಾಸಿಕದಲ್ಲಿ ಕಂಪನಿಯ ಇ-ಕಾಮರ್ಸ್ ಆದಾಯ 10 ಮಿಲಿಯನ್ ಡಾಲರ್ ಆಗಿತ್ತು. ಕಂಪನಿಯ ವಾರ್ಷಿಕ ಸಕ್ರಿಯ ಗ್ರಾಹಕರ ನೆಲೆ 524 ಮಿಲಿಯನ್‌ಗೆ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...