alex Certify
ಕನ್ನಡ ದುನಿಯಾ       Mobile App
       

Kannada Duniya

4 ದಿನಗಳ ಕಾಲ ಹಾಯಾಗಿ ನಗರ ಸಂಚಾರ ಮಾಡಿತ್ತು ಕಡಲ ಸಿಂಹ

ಅಲಸ್ಕಾ: ಸಮುದ್ರದಿಂದ ಹೊರಬಂದ ಕಡಲ ಸಿಂಹವೊಂದು 4 ದಿನಗಳ ಕಾಲ ಅಲಸ್ಕಾದ ಸಿತ್ಕ ಪ್ರದೇಶದಲ್ಲಿದ್ದ ಅಪರೂಪದ ಘಟನೆ ನಡೆದಿದೆ.

ಸಿತ್ಕದಲ್ಲಿ ಶುಕ್ರವಾರ ಬೆಳಗಿನ ಜಾವ ಕಡಲ ಸಿಂಹ ಪ್ರತ್ಯಕ್ಷವಾಗಿದೆ. ವನ್ಯಜೀವಿ ಅಧಿಕಾರಿಗಳು, ಸಿತ್ಕ ಸ್ಥಳೀಯ ಆಡಳಿತ ಇದನ್ನು ಮತ್ತೆ ಸಮುದ್ರಕ್ಕೆ ಸೇರಿಸಲು ಹರಸಾಹಸಪಟ್ಟಿದೆ.

ಸೋಮವಾರದವರೆಗೆ ಅಧಿಕಾರಿಗಳ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಕಡಲ ಸಿಂಹದ ಮೇಲೆ ನಿರಂತರ ನೀರು ಚುಮುಕಿಸಿ, ಮತ್ತೆ ಸಮುದ್ರಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದೆ.

ಸಮುದ್ರದಿಂದ ಹೊರ ಬಂದ ಕಡಲ ಸಿಂಹ, ದಾರಿ ತಪ್ಪಿ ಸುಮಾರು ಮುಕ್ಕಾಲು ಮೈಲಿನಷ್ಟು ದೂರಕ್ಕೆ ಸಾಗಿದೆ. ಅಗ್ನಿಶಾಮಕದ ದಳ ನಡೆಸಿದ 2 ಗಂಟೆಯ ಕಾರ್ಯಾಚರಣೆಯಲ್ಲಿ ಕಡಲ ಸಿಂಹವನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಲಾಗಿದೆ ಎಂದು ನ್ಯಾಷನಲ್‌ ಓಶಿಯಾನಿಕ್‌ ಹಾಗೂ ಅಟ್‌ಮೋಸ್ಫಿಯರಿಕ್‌ ಅಡ್ಮಿನಿಷ್ಟ್ರೇಷನ್‌(ಎನ್‌ಒಎಎ) ತಿಳಿಸಿದೆ.

ಭಾನುವಾರವಾದರೂ ಪ್ರಾಣಿಯನ್ನು ಸಮುದ್ರಕ್ಕೆ ಅಟ್ಟುವಲ್ಲಿ ಅಧಿಕಾರಿಗಳು ವಿಫಲವಾದ ವೇಳೆ ಈ ಪ್ರದೇಶದಿಂದ ದೂರವಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...