alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾಡ್ ಮ್ಯಾನ್ ನಿಷೇಧಕ್ಕೆ ಇಂಥ ಕಾರಣ ನೀಡಿದ ಪಾಕ್

ಅಕ್ಷಯ್ ಕುಮಾರ್ ಅಭಿಯದ ಪ್ಯಾಡ್ ಮ್ಯಾನ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಫೆಬ್ರವರಿ 9ರಂದು ತೆರೆ ಕಂಡಿರುವ ಚಿತ್ರಕ್ಕೆ ಉತ್ತಮ ರಿಸ್ಪಾನ್ಸ್ ಸಿಕ್ತಿದೆ. ಆದ್ರೆ ಚಿತ್ರ ತಂಡಕ್ಕೆ ಪಾಕಿಸ್ತಾನ ಕಹಿ ಸುದ್ದಿ ನೀಡಿದೆ. ಪ್ಯಾಡ್ ಮ್ಯಾನ್ ಚಿತ್ರವನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿದೆ.

ಮಹಿಳೆಯರ ಸಮಸ್ಯೆ ಆಧಾರಿತ ಈ ಚಿತ್ರವನ್ನು ಪಾಕಿಸ್ತಾನ ಧರ್ಮ ಹಾಗೂ ಸಂಸ್ಕೃತಿ ಕಾರಣ ಹೇಳಿ ನಿಷೇಧ ಹೇರಿದೆ. ಎಫ್ ಸಿ ಬಿ ಸದಸ್ಯ ಇಶಾಕ್ ಅಹ್ಮದ್ ಈ ಬಗ್ಗೆ ಅನೇಕ ಕಾರಣಗಳನ್ನು ಹೇಳಿದ್ದಾರೆ. ಚಿತ್ರ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಇಂಥ ಚಿತ್ರಗಳನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗಡೆ ವೇಳೆಯೂ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಪಾಕಿಸ್ತಾನಿ ಚಿತ್ರ ನಿರ್ಮಾಪಕ ಸೈಯದ್ ನೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ಯಾಡ್ ಮ್ಯಾನ್ ಒಂದೇ ಅಲ್ಲ ಪಾಕಿಸ್ತಾನದಲ್ಲಿ ಪದ್ಮಾವತ್ ಚಿತ್ರವನ್ನೂ ನಿಷೇಧಿಸಬೇಕಿತ್ತು. ಆ ಚಿತ್ರ ಮುಸ್ಲಿಂ ವಿರುದ್ಧವಾಗಿದೆ ಎಂದಿದ್ದಾರೆ.

ಚಿತ್ರದಲ್ಲಿ ಮುಟ್ಟು ಹಾಗೂ ನೈರ್ಮಲ್ಯದ ಬಗ್ಗೆ ತೋರಿಸಲಾಗಿದೆ. ಚಿತ್ರ ಕಥೆ ಹಾಗೂ ಅಕ್ಷಯ್ ಅಭಿನಯಕ್ಕೆ ಭಾರತೀಯ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...