alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯವೇ ಶಾಪವಾಯಿತು ಈ ಯುವಕನಿಗೆ

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಸುಂದರವಾಗಿರುವವರು ಅದೃಷ್ಟವಂತರು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಚೀನಾದ ವಿಮಾನ ನಿಲ್ದಾಣ ಸಿಬ್ಬಂದಿಯೊಬ್ಬನಿಗೆ ಸೌಂದರ್ಯವೇ ಶಾಪವಾಗಿಬಿಟ್ಟಿದೆ.

ಈ ಹ್ಯಾಂಡ್ಸಮ್ ಯುವಕನ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಆ ತಪ್ಪಿಗೆ ಶೇ.10ರಷ್ಟು ಸಂಬಳ ಕಡಿತ ಮಾಡಲಾಗಿದೆ. ಕ್ಸಿಯಾಮೆನ್ ವಿಮಾನ ನಿಲ್ದಾಣದಲ್ಲಿ ತಂತ್ರಜ್ಞನಾಗಿ ಈತ ಕೆಲಸ ಮಾಡ್ತಾನೆ.

ಸನ್ ಗ್ಲಾಸ್ ಹಾಗೂ ಹೆಡ್ ಸೆಟ್ ಹಾಕಿಕೊಂಡು ಆತ ನಡೆದುಕೊಂಡು ಹೋಗ್ತಿರೋ ವಿಡಿಯೋ ವೈರಲ್ ಆಗಿತ್ತು. ಎಲ್ಲರೂ ದಕ್ಷಿಣ ಕೊರಿಯಾದ ನಟ ಸೊಂಗ್ ಜೂಂಗ್ ಕಿಗೆ ಈತನನ್ನು ಹೋಲಿಸಿದ್ದರು. ಈ ವಿಡಿಯೋದಿಂದ ಉಂಟಾದ ಪರಿಣಾಮಗಳನ್ನು ಗಮನಿಸಿ ಕಂಪನಿಗೆ ಅವನ ಸಂಬಳ ಕಡಿತ ಮಾಡಿದೆಯಂತೆ.

ಚೀನಾ ಕಂಪನಿಯ ಈ ವರ್ತನೆ ನಿಜಕ್ಕೂ ಸರಿಯಿಲ್ಲ ಅಂತಾ ಆಕ್ರೋಶ ವ್ಯಕ್ತವಾಗಿದೆ. ತಪ್ಪೇ ಮಾಡದ ಯುವಕನಿಗೆ ಶಿಕ್ಷೆ ವಿಧಿಸಿದ್ದು ಅನ್ಯಾಯ ಅನ್ನೋದು ಎಲ್ಲರ ಅಭಿಪ್ರಾಯ. ಆದ್ರೆ ಆ ಯುವಕ ಮಾತ್ರ ತಲೆಕೆಡಿಸಿಕೊಂಡಿಲ್ಲ, ಇಷ್ಟು ಬೇಗ ತಾನು ಫೇಮಸ್ ಆಗಿರೋದಕ್ಕೆ ಖುಷಿ ಪಡ್ತಿದ್ದಾನೆ.

Heartthrob airport worker

Hottie airport worker got 10% of his salary deducted after this video went viral👉 http://shst.me/g1g

Posted by Shanghaiist on Thursday, March 15, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...