alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ…!

ಲಂಡನ್: ವಿಮಾನಗಳಲ್ಲಿ ಪ್ರಯಾಣಿಸುವವರು ಬೆಚ್ಚಿ ಬೀಳುವಂತಹ ಸುದ್ದಿಯೊಂದಿದೆ.

ಏರ್ ಪೋರ್ಟ್ ನಲ್ಲಿ ಸೆಕ್ಯುರಿಟಿ ಚೆಕ್ ಪಾಯಿಂಟ್ ನಲ್ಲಿ ಇಟ್ಟಿರುವ ಟ್ರೇಗಳಲ್ಲಿ ಶೌಚಾಲಯದಲ್ಲಿರುವುದಕ್ಕಿಂತಲೂ ಅಧಿಕ ಪ್ರಮಾಣದ ಕೀಟಾಣುಗಳಿರುತ್ತವಂತೆ. ಹಾಗಂತ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ.

ಈ ಬಗ್ಗೆ ತಿಳಿಯುವ ಸಲುವಾಗಿಯೇ ಯುನೈಟೈಡ್ ಕಿಂಗ್ ಡಂನ ನಾಟಿಂಗ್ ಹ್ಯಾಂ ವಿವಿಯ ಸಂಶೋಧಕರು 2016ರ ಚಳಿಗಾಲದಲ್ಲಿ ಹಲ್ಸಂಕಿ ವಾಂಟಾ ವಿಮಾನ ನಿಲ್ದಾಣದಲ್ಲಿ ಕೂಲಂಕುಶವಾಗಿ ಅಧ್ಯಯನ ನಡೆಸಿದ್ದರು. ಅತಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಸುವ ಸಲುವಾಗಿ ನಡೆಸಿದ ಅಧ್ಯಯನದ ಒಂದು ಭಾಗ ಇದಾಗಿತ್ತು.

ಏರ್ ಪೋರ್ಟ್ ಭದ್ರತಾ ತಪಾಸಣೆ ವೇಳೆ ಪ್ರಯಾಣಿಕರು ಹ್ಯಾಂಡ್ ಬ್ಯಾಗ್, ವಾಚ್, ಪರ್ಸ್, ಲ್ಯಾಪ್ ಟಾಪ್, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಈ ಟ್ರೇನಲ್ಲಿಟ್ಟು ಎಕ್ಸ್ ರೇ ಚೆಕ್ ಪಾಯಿಂಟ್ ನಲ್ಲಿ ಒಪ್ಪಿಸಬೇಕು, ಈ ಟ್ರೇಗಳು ಬಹಳಷ್ಟು ಜನರ ಕೈ ಬದಲಾಗುವುದರಿಂದ ಕೀಟಾಣುಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿರುತ್ತದೆ.

ಅದರಲ್ಲೂ ಸಾಮಾನ್ಯ ಶೀತಕ್ಕೆ ಕಾರಣವಾಗುವ ರಿನೋ ವೈರಸ್ ಎಂಬ ವೈರಸ್ ಢಾಳಾಗಿದೆ ಎಂದು ಹೇಳಲಾಗಿದೆ. ಅಚ್ಚರಿಯ ವಿಷಯವೆಂದರೆ ಇಂತಹ ಕೀಟಾಣುಗಳನ್ನು ಶೌಚಾಲಯದಲ್ಲೂ ಕಾಣಸಿಗದು ಎಂಬುದು ಸಂಶೋಧಕರು ಹೇಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...