alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಇದ್ರೆ ಈ ಕ್ಲೀನರ್ ಗೆ ಸೇರುತ್ತೆ ಕೆಜಿಗಟ್ಟಲೆ ಚಿನ್ನ

ದಕ್ಷಿಣ ಕೊರಿಯಾದ ಇಂಚಿಯೋನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಲೀನಿಂಗ್ ಮಾಡುವ ವ್ಯಕ್ತಿಗೆ 7 ಬಾರ್ ಚಿನ್ನ ಸಿಕ್ಕಿದೆ. ಸುಮಾರು 3 ಲಕ್ಷ 25 ಸಾವಿರ ಡಾಲರ್ ಮೌಲ್ಯದ ಚಿನ್ನ ಅಂದಾಜು 1 ಕೆಜಿ ಇದೆ. ಎಲ್ಲಾ ಅಂದುಕೊಂಡಂಗೆ ಆದರೆ ಇನ್ನು 6 ತಿಂಗಳಲ್ಲಿ ಆ ಕ್ಲೀನರ್ ಕಾನೂನಿನ ಪ್ರಕಾರ ಅಷ್ಟೂ ಚಿನ್ನದ ಮಾಲೀಕನಾಗುತ್ತಾನೆ.

ಕಸದ ತೊಟ್ಟಿಯಲ್ಲಿ ಪೇಪರ್ ನಲ್ಲಿ ಸುತ್ತಿಟ್ಟು ಎಸೆಯಲಾಗಿದ್ದ ಚಿನ್ನದ ಗಟ್ಟಿಯನ್ನು ನೋಡಿದ ಕ್ಲೀನರ್ ಏರ್ ಪೋರ್ಟ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದ. ಈ ಬಗ್ಗೆ ಅಲ್ಲಿನ ಅಧಿಕಾರಿಗಳು ವಿಚಾರಣೆ ನಡೆಸಲಾಗಿ ಹಾಕಾಂಗ್ ನಿಂದ ಜಪಾನ್ ಗೆ ತೆರಳುತ್ತಿದ್ದ ಕೊರಿಯನ್ ವ್ಯಕ್ತಿಯೊಬ್ಬನಿಗೆ ಈ ಚಿನ್ನದ ಗಟ್ಟಿ ಸೇರಿದ್ದು ಎನ್ನಲಾಗಿದೆ. ಆದರೆ ದಕ್ಷಿಣ ಕೊರಿಯಾದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿಯುತ್ತಾರೆಂಬ ಭಯದಿಂದ ಕಸದ ತೊಟ್ಟಿಯಲ್ಲಿ ಎಸೆದು ಪರಾರಿಯಾಗಿದ್ದ.

ಆದರೆ ಇದು ಯಾವುದೇ ಕ್ರಿಮಿನಲ್ ಚಟುವಟಿಕೆಗೆ ಸಂಬಂಧಿಸಿದ ಚಿನ್ನ ಅಲ್ಲವೆಂದು ಸಾಬೀತಾದಲ್ಲಿ ಹಾಗೂ ಇದರ ಮಾಲೀಕರು ತನ್ನದೆಂದು ಹೇಳಿಕೊಂಡು ಮುಂದೆ ಬರದೇ ಇದ್ದಲ್ಲಿ ಕಾನೂನಿನ ಪ್ರಕಾರ ಈ ಅಷ್ಟೂ ಚಿನ್ನ ಕ್ಲೀನರ್ ಗೆ ಸೇರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...