alex Certify
ಕನ್ನಡ ದುನಿಯಾ       Mobile App
       

Kannada Duniya

ಗಗನಸಖಿ ಹುದ್ದೆಗೆ 1000 ಕ್ಕೂ ಅಧಿಕ ಸೌದಿ ಮಹಿಳೆಯರಿಂದ ಅರ್ಜಿ

ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಮೂಲದ ವಿಮಾನಯಾನ ಸಂಸ್ಥೆ ಮಹಿಳೆಯರಿಗೆ ಗಗನಸಖಿ‌ ಹಾಗೂ ಕೋ‌ ಪೈಲೆಟ್ ಆಗಲು ಅವಕಾಶ ನೀಡಿದೆ.

ರಿಯಾದ್ ಮೂಲದ ಫ್ಲೈನಾಸ್ ಏರ್ಲೈನ್ ಸಂಸ್ಥೆ‌ ಮಹಿಳೆಯರಿಗೆ ಅವಕಾಶ ನೀಡಿದ್ದು, ಈಗಾಗಲೇ ಗಗನಸಖಿ ಹಾಗೂ ಕೋ ಪೈಲೆಟ್ ಹುದ್ದೆಗೆಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.

ಮಹಿಳಾ ಸಬಲೀಕರಣ ಭಾಗವಾಗಿ, ಕೆಲ ದಿನಗಳ ಹಿಂದಷ್ಟೇ ಸೌದಿಯಲ್ಲಿ ಕಾರ್ ಚಾಲನೆ ಮಾಡಲು‌ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮಹಿಳೆಯರಿಗೆ ವೈಮಾನಿಕ‌ ಕ್ಷೇತ್ರದಲ್ಲಿ ಅವಕಾಶ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಸೌದಿಯಲ್ಲಿ ಮಹಿಳೆಯರು ವಿಮಾನಯಾನ ಕ್ಷೇತ್ರದಲ್ಲಿ ಕೆಲಸ‌ ಮಾಡಬಾರದು ಎನ್ನುವ ನಿಯಮವೇನಿಲ್ಲ. ಆದರೂ ಸಂಪ್ರದಾಯದ ಹೆಸರಲ್ಲಿ ಇಲ್ಲಿಯವರೆಗೆ ಸಾಧ್ಯವಾಗಿರಲಿಲ್ಲ. ಈ ಎಲ್ಲ ಅವಕಾಶ ವಿದೇಶಿ ಮಹಿಳೆಯರು ಪಡೆದುಕೊಳ್ಳುತ್ತಿದ್ದರು. ಆದ್ದರಿಂದ ಇದೀಗ ಸೌದಿ ಯುವತಿಯರಿಗೆ ಗಗನಸಖಿಯರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...