alex Certify
ಕನ್ನಡ ದುನಿಯಾ       Mobile App
       

Kannada Duniya

ಕಲುಷಿತ ಗಾಳಿಯಿಂದ ಹೃದಯಾಘಾತ !

heart attack symbolic image

ಹೊರಗೆ ಕಾಲಿಟ್ಟರೆ ಸಾಕು ಭರ್ರೆಂದು ಕಪ್ಪು ಹೊಗೆ ಸೂಸುತ್ತ ಸಾಗುವ ವಾಹನಗಳು, ಎತ್ತರವಾದ ಚಿಮಣಿಯಿಂದ ಹೊಗೆ ಉಗುಳುವ ಫ್ಯಾಕ್ಟರಿಗಳು… ಉಸಿರಾಡಲೂ ಹೆಣಗಬೇಕಾದ ಪರಿಸ್ಥಿತಿ.

ವಾಯು ಮಾಲಿನ್ಯ ಇಂದು ವಿಶ್ವದಾದ್ಯಂತ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ಇದಕ್ಕೆ ಕಾರಣಗಳು ನಮ್ಮ ಕಣ್ಣೆದುರೇ ಇವೆ.  ಕೈಗಾರಿಕೆಗಳು ಹಾಗೂ ವಾಹನಗಳಿಂದ ವಿಷಕಾರಿ ಅನಿಲ ವಾತಾವರಣ ಸೇರುತ್ತಿದೆ. ಇಂಗಾಲವನ್ನು ಹೀರಿಕೊಂಡು ವಾತಾವರಣಕ್ಕೆ ಆಮ್ಲಜನಕ ನೀಡುವ ವೃಕ್ಷಗಳ ಮಾರಣಹೋಮ ಎಗ್ಗಿಲ್ಲದೆ ಸಾಗಿದೆ. ಕಲುಷಿತ ವಾತಾವರಣದಿಂದ ನೆಗಡಿ, ಕಣ್ಣುರಿ, ಅಸ್ತಮಾ, ಕ್ಯಾನ್ಸರ್ ನಂತಹ ಭಯಂಕರ ರೋಗಗಳು ಬರುತ್ತಿವೆ. ಇವೆಲ್ಲದರ ಜೊತೆಗೆ ವಾಯುಮಾಲಿನ್ಯದಿಂದ ಹೃದಯಾಘಾತ ಕೂಡ ಸಂಭವಿಸುತ್ತದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.

ಮಲಿನಕಾರಕ ವಾಯುಸೇವನೆಯಿಂದ ಹೃದಯಾಘಾತ ಪುನರಾವರ್ತನೆಯಾಗುತ್ತದೆ. ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಅನಿಲಗಳು ಗಾಳಿಯ ಗುಣಮಟ್ಟವು ಕುಸಿಯುವಂತೆ ಮಾಡುತ್ತದೆ. ಕ್ಲೋರೋಫ್ಲೋರೊಕಾರ್ಬನ್, ಕೆಲವು ಕೃತಕ ರಾಸಾಯನಿಕಗಳು ಶೈತ್ಯಕಾರಗಳಿಗೆ ಮತ್ತು ಮುಂದಕ್ಕೆ ನೂಕುವ ಸಾಧನಗಳಾದಂತಹ ವಿಮಾನ ಪಂಕಗಳಲ್ಲಿ ಉಪಯೋಗಿಸಲ್ಪಡುವುದರಿಂದ ಓಝೋನ್ ಪದರದಲ್ಲಿ ರಂಧ್ರವಾಗುತ್ತದೆ. ಇಂತಹ ನಿಷೇಧಿತ ರಾಸಾಯನಿಕಗಳ ಬಳಕೆಯೇ ವಾಯು ಮಾಲಿನ್ಯ ಹೆಚ್ಚಲು ಕಾರಣವಾಗಿದೆ.

ಉಸಿರಾಟದ ತೊಂದರೆಯೇ  ಮುಖ್ಯವಾಗಿರುವ ಅಸ್ತಮಾ, ಕಲುಷಿತ ಗಾಳಿಯಿಂದ ಪ್ರಚೋದಿಸಲ್ಪಡುತ್ತದೆ. ಇದರಿಂದ ಶ್ವಾಸಕೋಶ ಸಂಬಂಧಿ ಸೋಂಕು ಕೂಡ ಸಂಭವಿಸಬಹುದು. ಕಲುಷಿತ ಗಾಳಿಯಿಂದ ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪೊಲ್ಯುಮರಿ ಡಿಸೀಸ್ (COPD) ಆಗುತ್ತದೆ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಕೂಡಾ ಆಗಬಹುದು. ಇಂತಹ ಅನಾಹುತವನ್ನು ತಪ್ಪಿಸಲು ಒಳಾಂಗಣ ಸಸ್ಯಗಳು ಬೆಳೆಸುವುದು ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಮಾಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...