alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕ್ಕ ಮಕ್ಕಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುವ ಪೋಷಕರಿಗೆ ಗುಡ್ ನ್ಯೂಸ್

ಚಿಕ್ಕ ಮಕ್ಕಳ ಜೊತೆಗೆ ವಿಮಾನ ಪ್ರಯಾಣ ಮಾಡೋದು ನಿಜಕ್ಕೂ ಪ್ರಯಾಸದ ಕೆಲಸ. ಎಕಾನಮಿ ಕ್ಲಾಸ್ ನ ಸೀಟುಗಳಲ್ಲಿ ಆರಾಮಾಗಿ ಕೂರುವುದೇ ಕಷ್ಟ, ಅಂಥದ್ರಲ್ಲಿ ಮಗುವನ್ನು ಹೇಗೆ ಮಲಗಿಸಿಕೊಳ್ಳೋದು ಅಂತಾ ಅಮ್ಮಂದಿರು ಪೇಚಾಡ್ತಾರೆ.

ಏರ್ ನ್ಯೂಜಿಲೆಂಡ್ ಇದಕ್ಕಾಗಿಯೇ ಹೊಸ ವ್ಯವಸ್ಥೆ ಮಾಡಿದೆ. ಪುಟ್ಟ ಮಕ್ಕಳನ್ನು ಕರೆತರುವ ಹೆತ್ತವರಿಗಾಗಿ ಸ್ಕೈ ಕೌಚ್ ಗಳನ್ನು ನೀಡ್ತಿದೆ. ಅದು ಕೂಡ ಎಕಾನಮಿ ಕ್ಲಾಸ್ ನಲ್ಲಿ. ಇಲ್ಲಿ ಸೀಟುಗಳಲ್ಲೇ ಉದ್ದಕ್ಕೆ ಮಲಗಿ, ಮಕ್ಕಳನ್ನು ಪಕ್ಕದಲ್ಲೇ ಮಲಗಿಸಿಕೊಳ್ಳಲು ಹೆತ್ತವರಿಗೆ ಅವಕಾಶ ನೀಡಲಾಗುತ್ತಿದೆ.

ಸದ್ಯ 777 ಹಾಗೂ 787-9 ವಿಮಾನಗಳಲ್ಲಿ ಈ ರೀತಿಯ ವ್ಯವಸ್ಥೆ ಇದೆ. ಡೊಮೆಸ್ಟಿಕ್ ಹಾಗೂ ಅಂತರಾಷ್ಟ್ರೀಯ ವಿಮಾನಗಳಲ್ಲಿ ಈ ರೀತಿಯ ಸೀಟುಗಳು ಲಭ್ಯವಿವೆ. ಸುಂದರವಾದ ಹಾಸಿಗೆ ಮತ್ತು ತಲೆದಿಂಬನ್ನು ಕೂಡ ಕೊಡಲಾಗುತ್ತದೆ. ಮಕ್ಕಳಿಗೆ ಸೇಫ್ಟಿಗಾಗಿ ಬೆಲ್ಟ್ ಹಾಕಿ ಮಲಗಿಸಬಹುದು. ವಿಮಾನ ಅತ್ತಿಂದಿತ್ತ ಹೊಯ್ದಾಡಿದರೂ ಮಗು ಬೀಳುವ ಭಯವಿರುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...