alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿದ್ದ ಏರ್ ಇಂಡಿಯಾ ವಿಮಾನ

air-india-flight-7666ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ನ ಹೀಥ್ರೋ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಕೆಲ ಕಾಲ ಎಟಿಸಿ ಜೊತೆ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿದ್ದ ಘಟನೆ ವರದಿಯಾಗಿದೆ.

ಅಹ್ಮದಾಬಾದ್ ನಿಂದ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಈ ವಿಮಾನದಲ್ಲಿ 231 ಪ್ರಯಾಣಿಕರು ಹಾಗೂ 18 ಮಂದಿ ಏರ್ ಇಂಡಿಯಾ ಸಿಬ್ಬಂದಿ ಇದ್ದರು.

ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7 ಗಂಟೆಗೆ ಹಾರಾಟ ಆರಂಭಿಸಿದ ವಿಮಾನ, ಹಂಗೇರಿ ವಲಯದಲ್ಲಿದ್ದಾಗ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಸಂಪರ್ಕ ಕಳೆದುಕೊಂಡಿತ್ತು. ಕೂಡಲೇ ಜೆಟ್ ವಿಮಾನಗಳು ನೆರವಿಗೆ ಧಾವಿಸಿದ್ದು, 11-05 ಕ್ಕೆ ಲಂಡನ್ ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ತರಂಗಾಂತರಗಳಲ್ಲಿ ಉಂಟಾದ ವ್ಯತ್ಯಾಸದಿಂದ ಎಟಿಸಿ ಸಂಪರ್ಕ ಕಡಿತಗೊಂಡಿದ್ದಾಗಿ ಏರ್ ಇಂಡಿಯಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...