alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಮಾಣ ಹಂತದ ರನ್ ವೇನಲ್ಲಿ ವಿಮಾನ ಭೂಸ್ಪರ್ಶ

ಇನ್ನೂ ನಿರ್ಮಾಣ ಹಂತದಲ್ಲಿದ್ದ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಭೂ ಸ್ಪರ್ಶ ಮಾಡಿದ ಘಟನೆ ಮಾಲ್ಡೀವ್ಸ್ ನಲ್ಲಿ ನಡೆದಿದೆ. ಮಾಲ್ಡೀವ್ಸ್ ನ ಮಾಲೆ ವಿಮಾನ ನಿಲ್ದಾಣದ ನಿರ್ಮಾಣ ಹಂತದಲ್ಲಿದ್ದ ಮತ್ತು ಇನ್ನೂ ಕಾರ್ಯಾರಂಭ ಮಾಡದ ರನ್ ವೇ ನಲ್ಲಿ ಪೈಲೆಟ್ ವಿಮಾನವನ್ನು ತಪ್ಪಾಗಿ ನೆಲಕ್ಕಿಳಿಸಿದ್ದಾರೆ.

ದೆಹಲಿ-ತಿರುವನಂತಪುರಂ-ಮಾಲೆ ನಡುವೆ ಸಂಚರಿಸುವ ಎಐ263 ವಿಮಾನವನ್ನು ತಪ್ಪಾದ ರನ್ ವೇ ನಲ್ಲಿ ಲ್ಯಾಂಡಿಂಗ್ ಮಾಡಿದ್ದರಿಂದ ಪೈಲೆಟ್ ಗಳಿಬ್ಬರ ಮೇಲೆ ಭಾರತೀಯ ವೈಮಾನಿಕ ಇಲಾಖೆ ಅಧಿಕಾರಿಗಳು ತನಿಖೆ ನಡೆಸೋಕೆ ಮುಂದಾಗಿದ್ದಾರೆ. ಲ್ಯಾಂಡಿಂಗ್ ಗೇರ್ ವಿಫಲವಾದ ಕಾರಣ ತಪ್ಪಾದ ರನ್ ವೇ ನಲ್ಲಿ ವಿಮಾನ ಲ್ಯಾಂಡ್ ಮಾಡಿದ್ದಾಗಿ ಪೈಲೆಟ್ ತಿಳಿಸಿದ್ದಾರೆ.

ಘಟನೆಯಲ್ಲಿ ವಿಮಾನದ ಸಿಬ್ಬಂದಿ ಸೇರಿದಂತೆ 136 ಮಂದಿ ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ. ಏರ್ಕ್ರಾಫ್ಟ್ ಆಕ್ಸಿಡೆಂಡ್ ಇನ್ವೆಷ್ಟಿಗೇಶನ್ ಕೂಡ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದಿದೆ. ಆಗಸ್ಟ್ 3ರಂದು ಜೆಟ್ ಏರ್ವೇಸ್ ನ  ಬೋಯಿಂಗ್ 737 ವಿಮಾನ ಕೂಡ ರಿಯಾದ್ ಏರ್ಪೋರ್ಟ್ ನ ತಪ್ಪಾದ ರನ್ ವೇ ನಲ್ಲಿ ಲ್ಯಾಂಡ್ ಆಗಿತ್ತು. ವಿಮಾನದ ಸಿಬ್ಬಂದಿ ಸೇರಿದಂತೆ 150 ಮಂದಿ ಪ್ರಯಾಣಿಕರು ವಿಮಾನದಲ್ಲಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...