alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ಮಾಡಿದ

ನ್ಯೂಯಾರ್ಕ್ ನಿಂದ ದೆಹಲಿಗೆ ಬರ್ತಿದ್ದ ವಿಮಾನದಲ್ಲಿ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಯೊಬ್ಬ ಮಹಿಳೆ ಸೀಟ್ ನಲ್ಲಿ ಮೂತ್ರ ಮಾಡಿದ್ದಾನೆ. ಮಹಿಳೆ ಮಗಳು ಟ್ವೀಟರ್ ಮೂಲಕ ಏರ್ ಇಂಡಿಯಾಗೆ ದೂರು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಏರ್ ಇಂಡಿಯಾ ಭರವಸೆ ನೀಡಿದೆ.

ಪೀಡಿತ ಮಹಿಳೆ ಮಗಳ ಹೆಸರು ಇಂದ್ರಾಣಿ. ಪೀಡಿತ ಮಹಿಳೆಯೊಬ್ಬಳೇ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಳು ಎನ್ನಲಾಗಿದೆ. ಏರ್ ಇಂಡಿಯಾ ಎಐ 102 ವಿಮಾನದಲ್ಲಿ ಮದ್ಯಪಾನ ಮಾಡಿದ್ದ ನಾಚಿಕೆಗೇಡಿ ವ್ಯಕ್ತಿಯೊಬ್ಬ ತನ್ನ ತಾಯಿ ಕುಳಿತಿದ್ದ ಸೀಟ್ ಮೇಲೆ ಮೂತ್ರ ಮಾಡಿದ್ದಾನೆ. ಶೀಘ್ರವೇ ಈ ಬಗ್ಗೆ ಉತ್ತರ ನೀಡಿ ಎಂದು ಇಂದ್ರಾಣಿ ಟ್ವಿಟ್ ಮಾಡಿದ್ದಾರೆ.

ಏರ್ ಲೈನ್ ಕಾಲ್ ಸೆಂಟರ್ ಗೆ ಕರೆ ಮಾಡಿದ್ದೆ. ಆದ್ರೆ ವೆಬ್ಸೈಟ್ ನಲ್ಲಿ ಪ್ರತಿಕ್ರಿಯೆ ನೀಡುವಂತೆ ಹೇಳಲಾಗಿತ್ತು ಎಂದು ಇಂದ್ರಾಣಿ ಹೇಳಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲವಂತೆ. ದೂರು ದಾಖಲಾದ್ರೆ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...