alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಪುತ್ರನ ಗೆಳತಿಗಾಗಿ ಇಂತ ಕೆಲಸ ಮಾಡಿದ್ರು ಈ ತಂದೆ

ಅವರಿಬ್ಬರು ಶಾಲಾ ಸ್ನೇಹಿತರು. ಸ್ಕೂಲ್ ನಲ್ಲಿರುವಾಗಲೇ ಇವರಿಬ್ಬರ ನಡುವೆ ಪ್ರೀತಿ ಅಂಕುರವಾಗಿತ್ತು. 18 ವರ್ಷದ ಕೇಲೀ ಸುಡೆರ್ಸ್, 19 ವರ್ಷದ ಕಾರ್ಟರ್ ಬ್ರೌನ್, ತಮ್ಮ ಜೀವನದ ಮುಂದಿನ ಯೋಜನೆಗಳನ್ನೂ ಹಾಕಿಕೊಂಡಿದ್ರು. ಒಟ್ಟಿಗೆ ಪದವಿ, ಮದುವೆ, ಮಕ್ಕಳು ಮತ್ತು ನಿವೃತ್ತಿ ಹೀಗೆ ಪ್ರತಿಯೊಂದನ್ನು, ತಮ್ಮ ಪ್ರೀತಿ ಹುಟ್ಟಿದಾಗಲೇ ಯೋಚಿಸಿದ್ದರು.

ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದವು. ಈ ಕಾರ್ಯಕ್ರಮದಲ್ಲಿ ಸುಡೆರ್ಸ್ ಮತ್ತು ಕಾರ್ಟರ್ ನೃತ್ಯ ಪ್ರದರ್ಶಿಸಬೇಕಿತ್ತು. ಆದ್ರೆ ಕಾರು ಅಪಘಾತದಲ್ಲಿ ಕಾರ್ಟರ್ ಬ್ರೌನ್ ಕೊನೆಯುಸಿರೆಳೆದಿದ್ದ.

ಘಟನೆಯಿಂದ ಸುಡೆರ್ಸ್ ತೀವ್ರ ಆಘಾತಗೊಂಡಿದ್ಲು. ಆದ್ರೆ ಕಾರ್ಟರ್ ತಂದೆ ದುಃಖದ ನಡುವೆಯೂ ತನ್ನ ಮಗನ ಗೆಳತಿಯನ್ನು ಸಮಾಧಾನಪಡಿಸಿದ್ರು.

ಪುತ್ರ ಶೋಕದ ನಡುವೆಯೂ, ಭಾವಿ ಸೊಸೆಯಾಗಬೇಕಿದ್ದವಳನ್ನ ಖುಷಿಯಾಗಿಡಲು ಕಾರ್ಟರ್ ತಂದೆ ರಾಬರ್ಟ್ ಪ್ರಯತ್ನಿಸಿದ್ರು. ಇದಕ್ಕಾಗಿ ಶಾಲಾ ಬೀಳ್ಕೊಡುಗೆ ಸಮಾರಂಭಕ್ಕೆ ಸುಡೆರ್ಸ್ ಪಾಟ್ನರ್ ಆಗಿ ತೆರಳಿ, ಅಲ್ಲಿ ನೃತ್ಯ ಪ್ರದರ್ಶಿಸಿದ್ರು.

ಸದ್ಯ ತನ್ನ ಮೊದಲ ಪ್ರೀತಿಯನ್ನು ಕಳೆದುಕೊಂಡಿರೋ ಸುಡೆರ್ಡ್ ಮುಂದೆ ನರ್ಸ್ ಆಗಬೇಕೆಂದು ಬಯಸಿದ್ದಾಳೆ. ಆದ್ರೆ ಕಾರ್ಟರ್ ನೆನಪಲ್ಲೇ ಜೀವನ ಕಳೆಯೋದಾಗಿ ತಿಳಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...