alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಬಳಿಕ ಇದೀಗ ಮತ್ತೊಂದು ಮಾರುಕಟ್ಟೆಯತ್ತ ಚೀನಾ ಚಿತ್ತ

ಚೀನಾ ತನ್ನ ಸ್ಮಾರ್ಟ್ ಫೋನ್ ಗಳ ಕಬಂಧ ಬಾಹುವನ್ನು ಭಾರತದಲ್ಲಿ ಹರಡಿದ ಬಳಿಕ, ಇದೀಗ ಇನ್ನೊಂದು ಬೃಹತ್ ಯೋಜನೆಯನ್ನು ಭಾರತದಲ್ಲಿ ಆರಂಭಿಸಲು ಸದ್ದಿಲ್ಲದೇ ಸಿದ್ಧತೆ ನಡೆಸಿಕೊಂಡಿದೆ.

ಈಗಾಗಲೇ ಮೊಬೈಲ್ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಚೀನಾ ಮೊಬೈಲ್ ಕಂಪನಿಗಳು, ಇದೀಗ ಭಾರತದಲ್ಲಿ ಅಸಂಘಟಿತ ಕ್ಷೇತ್ರವಾಗಿರುವ ಮೊಬೈಲ್ ಬಿಡಿಭಾಗದ ಮಾರುಕಟ್ಟೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು, ಚೀನಾ ಕಂಪನಿಯೊಂದು, ಸುಮಾರು 10 ಸಾವಿರ ಕೋಟಿ ಮೌಲ್ಯವನ್ನು ಹೂಡಿಕೆ ಮಾಡಲು ಮುಂದಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ಮುಂದಿನ ಎರಡು ವರ್ಷದಲ್ಲಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ,

ಹಾಂಕಾಂಗ್ ಮೂಲದ ಡಬ್ಲೂ ಕೆ ಲೈಫ್ ಸಂಸ್ಥೆ, ಮೊಬೈಲ್ ಬಿಡಿಭಾಗದ ಮಾರುಕಟ್ಟೆ ಆರಂಭಿಸಲು ಸಿದ್ಧತೆ ನಡೆಸಿಕೊಂಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಸುಮಾರು 200 ಔಟ್ ಲೆಟ್ ಆರಂಭಿಸಲು ಈಗಾಗಲೇ ತಯಾರಿ ನಡೆಸಿಕೊಂಡಿದೆ ಎನ್ನಲಾಗಿದೆ. ಪ್ರಮುಖವಾಗಿ ಮೊಬೈಲ್ ಫೋನ್ ಕವರ್, ಪವರ್ ಬ್ಯಾಂಕ್, ಇಯರ್ ಫೋನ್, ಸ್ಪೀಕರ್ ಸೇರಿದಂತೆ ಹಲವು ಬಿಡಿಭಾಗಗಳನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲೂ ಕೆ ಲೈಫ್ ಸ್ಟೈಲ್ ಇಂಡಿಯಾ ಸಹ ಸಂಸ್ಥಾಪಕ ರೋಹಿತ್ ಸಹಾನಿ, ಮೊಬೈಲ್ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಆದರೆ ಮೊಬೈಲ್ ಬಿಡಿಭಾಗಗಳಿಗೆ ಅಗತ್ಯವಿರುವ ಮಾರುಕಟ್ಟೆಯ ಕೊರತೆಯಿದೆ. ಆದ್ದರಿಂದ ಈ ಕ್ಷೇತ್ರವನ್ನು ಬಳಸಿಕೊಳ್ಳಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...