alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆ ಯಶಸ್ವಿಯಾಗಿದ್ದಕ್ಕೆ ಖದೀಮರು ಮಾಡಿದ್ರು ಈ ಕೆಲಸ

ಟೆಕ್ಸಾಸ್  ನ ಡೋನಟ್ ಮಳಿಗೆಯೊಂದರಲ್ಲಿ ದರೋಡೆ ಮಾಡಿದ ಮೂವರು ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ವಿಚಿತ್ರ ಅಂದ್ರೆ ದರೋಡೆ ನಂತರ ಈ ಖದೀಮರು ಅಲ್ಲಿದ್ದ ಗ್ರಾಹಕರಿಗೆ ಸಿಹಿ ಹಂಚಿದ್ದಾರೆ.

ಅವರ ಬಳಿಯಿದ್ದ ಮೊಬೈಲ್, ಹಣವನ್ನೆಲ್ಲ ದೋಚಿಕೊಂಡು ಕೊನೆಗೆ ಅವರಿಗೆ ಡೋನಟ್ ತಿನ್ನಿಸಿ ಪರಾರಿಯಾಗಿದ್ದಾರೆ. ಅಕ್ಟೋಬರ್ 16ರಂದು ಈ ಕೃತ್ಯ ನಡೆದಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ದರೋಡೆ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಳಿಗೆಗೆ ನುಗ್ಗಿದ್ದ ಮೂವರೂ ಆರಾಮಾಗಿ ಈ ಕೃತ್ಯ ನಡೆಸಿದ್ದಾರೆ. ಒಬ್ಬ ಎಲ್ಲಾ ನಗದು ದೋಚಿದ್ರೆ, ಇನ್ನೊಬ್ಬ ಮೊಬೈಲ್ ಗಳನ್ನೆಲ್ಲ ವಶಪಡಿಸಿಕೊಂಡಿದ್ದಾನೆ. ಮತ್ತೋರ್ವ ಎಲ್ಲಾ ಗ್ರಾಹಕರು ಮತ್ತು ಮಳಿಗೆಯ ಸಿಬ್ಬಂದಿಗೆ ಸಿಹಿ ಹಂಚಿದ್ದಾನೆ. ತಮ್ಮ ಕೆಲಸವನ್ನು ಸುಲಭವಾಗಿ ಮುಗಿಸಿಕೊಂಡು, ಗ್ರಾಹಕರು ಮತ್ತು ಸಿಬ್ಬಂದಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ದರೋಡೆಕೋರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...