alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕರಗಿಸುತ್ತೆ ಪುಟ್ಟ ಬಾಲಕಿಯ ಈ ಕಥೆ

girl_14ಚೀನಾದ ಈ 5 ವರ್ಷದ ಬಾಲಕಿಯ ಕಥೆ ನಿಜಕ್ಕೂ ಕರುಣಾಜನಕ. ಆಕೆ ಇನ್ನೂ ಮೂರು ತಿಂಗಳ ಮಗುವಾಗಿದ್ದಾಗಲೇ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ತಂದೆ ಜೈಲಿಗೆ ಹೋಗಿದ್ದ. ಅದಾದ ಬಳಿಕ ಆಕೆಯ ತಾಯಿ ಮರು ಮದುವೆಯಾಗಿದ್ದು, ಇದೀಗ ಆ ಪುಟ್ಟ ಬಾಲಕಿ ತನ್ನ ಅಜ್ಜಿ ಹಾಗೂ ಮುತ್ತಜ್ಜಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾಳೆ.

ಇಂತದೊಂದು ಪ್ರಕರಣ ವರದಿಯಾಗಿರುವುದು ಚೀನಾದ ಜುನೈಯಿ ಪ್ರಾಂತ್ಯದಿಂದ. ತಂದೆ-ತಾಯಿ ಬದುಕಿದ್ದರೂ ತನ್ನ ಪಾಲಿಗೆ ಲಭ್ಯವಿರದನ್ನು ಮರೆ ಮಾಚುವಂತೆ ಈ ಪುಟ್ಟ ಬಾಲಕಿ ತನ್ನ ಅಜ್ಜಿ ಹಾಗೂ 92 ವರ್ಷದ ಮುತ್ತಜ್ಜಿಯನ್ನು ನೋಡಿಕೊಳ್ಳುತ್ತಿದ್ದಾಳೆ.

ವಾಂಗ್ ಅನ್ನಾ ಎಂಬ ಈ ಬಾಲಕಿ ಮಾಡುತ್ತಿರುವ ಕಾರ್ಯವನ್ನು ಮೂಕವಿಸ್ಮಿತರಾಗಿ ನೋಡುತ್ತಿರುವ ಸ್ಥಳೀಯರು ಅಕೆಗೆ ಎಲ್ಲ ನೆರವನ್ನೂ ನೀಡುತ್ತಿದ್ದು, ತನಗೆ ಬೇಕಾದ ಸರಂಜಾಮುಗಳನ್ನು ಕೊಳ್ಳಲು ಬಂದ ವೇಳೆ ಹಣ ಪಡೆಯದೆ ಆಕೆಗೆ ಸಹಾಯ ಮಾಡುತ್ತಿದ್ದಾರೆ. ವೃದ್ದಾಪ್ಯದಲ್ಲಿರುವ ಹಿರಿ ಜೀವಿಗಳನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಬಾಲಕಿ ವಾಂಗ್ ಅನ್ನಾ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...