alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಥ ಮಗುವಿಗೆ ಅಮ್ಮನ ಅಪ್ಪುಗೆ ನೀಡಲು ಅಮೆರಿಕದಿಂದ ಬಂದ್ಲು ಮಹಿಳೆ

ಹೈದ್ರಾಬಾದ್ ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ತಾಯಿಯ ಸಾವಿನ ಅರಿವಿಲ್ಲದೇ ಪುಟ್ಟ ಬಾಲಕ ಶವದ ಪಕ್ಕದಲ್ಲೇ ನಿದ್ರಿಸಿದ್ದ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದನ್ನು ತಿಳಿದ ಅಮೆರಿಕ ನಿವಾಸಿ ವಿ.ಶ್ರೀದೇವಿ ಮಗುವನ್ನು ಮಮತೆಯಿಂದ ತಬ್ಬಿಕೊಳ್ಳಲು ದೂರದ ದೇಶದಿಂದ ಹೈದ್ರಾಬಾದ್ ಗೆ ಬಂದಿದ್ದರು.

ಶಮ್ಷಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ಶ್ರೀದೇವಿ ಅಲ್ಲಿ ಬಾಲಕ ಶೋಯೆಬ್ ನನ್ನು ಭೇಟಿ ಮಾಡಿದ್ರು. ಆತನಿಗೆ ಚಾಕಲೇಟ್, ಗಿಫ್ಟ್, ಬಟ್ಟೆಗಳನ್ನು ಸಹ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಆ ಮಗುವಿನ ಜೊತೆಗೆ ಕಾಲ ಕಳೆದಿದ್ದಾರೆ.

ಶ್ರೀದೇವಿಗೆ ಅಷ್ಟು ಚೆನ್ನಾಗಿ ಹಿಂದಿ ಬರುತ್ತಿರಲಿಲ್ಲವಾದ್ದರಿಂದ ಅಲ್ಲೇನು ನಡೆಯುತ್ತಿದೆ ಅನ್ನೋದು ಶೋಯೆಬ್ ಗೆ ಗೊತ್ತಿರಲಿಲ್ಲ. ಆದ್ರೆ ಹೊಸ ಬಗೆಯ ಆಟಿಕೆಗಳನ್ನೆಲ್ಲ ನೋಡಿ ಆತ ಫುಲ್ ಖುಷ್ ಆಗಿದ್ದ. ಶೋಯೆಬ್ ತಾಯಿಯ ಸಾವಿನ ಸುದ್ದಿ ಕೇಳಿದ ಶ್ರೀದೇವಿ, ಎನ್ ಜಿ ಓ ವನ್ನು ಸಂಪರ್ಕಿಸಿ ಬಾಲಕನನ್ನು ಭೇಟಿಯಾಗಲು ಅವಕಾಶ ಕೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...