alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಪೋಷಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಹಲವು ಜೀವಗಳನ್ನು ಬಲಿತೆಗೆದುಕೊಂಡು ವಿಶ್ವಾದ್ಯಂತ ಆತಂಕ ಹುಟ್ಟುಹಾಕಿದ್ದ ಬ್ಲೂ ವೇಲ್ ಚಾಲೆಂಜ್ ಬಳಿಕ ಇದೀಗ ಮೊಮೊ ಚಾಲೆಂಜ್ ಸದ್ದು ಮಾಡುತ್ತಿದೆ. ಅರ್ಜೆಂಟೆನಾದಲ್ಲಿ ಹನ್ನೆರಡು ವರ್ಷದ ಬಾಲಕಿಯೊಬ್ಬಳು ಮೊಮೊ ಆಟದ ಸವಾಲಿಗೆ ಬಲಿಯಾಗಿದ್ದಾಳೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮೊಮೊ ಚಾಲೆಂಜ್ ಎಂದು ಕರೆಯಲ್ಪಡುವ ಇಂಟರ್ನೆಟ್ ಆಧಾರಿತ ಸವಾಲಿನ ಆಟದ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದ್ದು, ಮಕ್ಕಳ ಚಟುವಟಿಕೆ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ಹೆದರಿಕೆ ಸೃಷ್ಟಿಸುವ ವೈಶಿಷ್ಟ್ಯಗಳೊಂದಿಗೆ ಮಹಿಳೆ ತೋರಿಸುವ ಕಲಾಕೃತಿಯನ್ನು ಈ ಸವಾಲಿನಲ್ಲಿ ಬಳಸುತ್ತದೆ. ‘ಬ್ಲೂ ವೇಲ್’ನಂತೆಯೇ ಮಾಮೋ ಚಾಲೆಂಜ್ ಭಾಗವಹಿಸುವವರು ಅಜ್ಞಾತ ಸಂಖ್ಯೆಯೊಂದಿಗೆ ಸಂವಹನ ನಡೆಸಲು ಕೇಳಿದ ನಂತರ ಕೆಲವು ಆದೇಶಗಳನ್ನು ಅನುಸರಿಸಲು ಸಹ ಸೂಚಿಸಲಾಗುತ್ತದೆ.

ಒಂದೊಮ್ಮೆ ಆಟಗಾರರು ಬದ್ಧರಾಗಿರಲು ನಿರಾಕರಿಸಿದರೆ, ಹಿಂಸಾತ್ಮಕ ಚಿತ್ರಗಳ ಮೂಲಕ ಅವರಿಗೆ ಬೆದರಿಕೆ ಬರಲಿದೆ.

ಮೊಮೊ ಬಗ್ಗೆ ಈಗಾಗಲೇ ಟ್ವೀಟರ್ ನಲ್ಲಿ ಅನೇಕರು ಎಚ್ಚರಿಕೆಯುತ ಸಂದೇಶ ಹರಿಯಬಿಟ್ಟಿದ್ದಾರೆ. ಅಪರಾಧಿಗಳು ಜನರಿಂದ ದತ್ತಾಂಶವನ್ನು ಕದಿಯಲು ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಈ ಆಟ ಸಾಧ್ಯತೆಯಾಗಲಿದೆ ಎಂದು ಕೆಲವರು ಆತಂಕ ಹೊರಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...