alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರಾರು ಜನರನ್ನು ಕಾಪಾಡಿದ್ದ ಸೈನಿಕನ ದುರಂತ ಅಂತ್ಯ

ದಶಕಗಳಿಂದ್ಲೂ ಹಿಂಸಾಚಾರಪೀಡಿತವಾಗಿರೋ ಅಫ್ಘಾನಿಸ್ತಾನದಲ್ಲಿ ಪ್ರಾಣ ಕಳೆದುಕೊಂಡ ಯೋಧರು, ರಕ್ಷಣಾ ಅಧಿಕಾರಿಗಳಿಗೆ ಲೆಕ್ಕವೇ ಇಲ್ಲ. ಬಹಾದುರ್ ಆಘಾ ಕೂಡ ಅವರಲ್ಲೊಬ್ಬರು. ಬಾಂಬ್ ನಿಷ್ಕ್ರಿಯ ದಳದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ರು.

ನೂರಾರು ಸಜೀವ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿದ ಹೆಗ್ಗಳಿಕೆ ಇವರದ್ದಾಗಿತ್ತು. ಈ ಸಂದರ್ಭಗಳಲ್ಲಿ 6 ಬಾರಿ ಬಹಾದುರ್ ಬಾಂಬ್ ಸ್ಫೋಟಿಸಿ ಗಾಯಗೊಂಡಿದ್ದರು. ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿ ಸಾವಿರಾರು ಜನರ ಪ್ರಾಣ ಕಾಪಾಡಿದ್ದ 31 ವರ್ಷದ ಬಹಾದುರ್ ಈಗ ಸಾವನ್ನಪ್ಪಿದ್ದಾರೆ.

7ನೇ ಬಾರಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ್ರೆ ತಾನು ಬದುಕುವುದಿಲ್ಲ ಎನ್ನುತ್ತಿದ್ದರು ಬಹಾದುರ್. ಅವರು ಹೇಳಿದಂತೆಯೇ ಆಗಿದೆ. ಗಣಿ ಸ್ಫೋಟವೊಂದರಲ್ಲಿ ಬಹಾದುರ್ ಹುತಾತ್ಮರಾಗಿದ್ದಾರೆ. 15 ವರ್ಷದವರಿದ್ದಾಗ್ಲೇ ಅಫ್ಗಾನ್ ಸೇನೆ ಸೇರಿದ್ದ ಬಹಾದುರ್ ಸೇವೆ ನಿಜಕ್ಕೂ ಇಡೀ ವಿಶ್ವಕ್ಕೇ ಮಾದರಿ.

ಬಹಾದುರ್ ತಾಯಿ ಸೇರಿದಂತೆ ಕುಟುಂಬದ ಇತರ ಸದಸ್ಯರೆಲ್ಲ ತಾಲಿಬಾನ್ ದಾಳಿಗೆ ಬಲಿಯಾಗಿದ್ದರು. ಅದೇ ನೋವಿನಲ್ಲಿ ಬಹಾದುರ್ ಸೈನ್ಯ ಸೇರಿದ್ದರು. ಸಾವಿಗೆ ಮೂರು ವಾರಗಳ ಮುನ್ನ ಸಾಹಸಿ ಯೋಧನೆಂಬ ಪ್ರಶಸ್ತಿಯನ್ನು ಕೂಡ ನೀಡಿ ಬಹಾದುರ್ ರನ್ನು ಗೌರವಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...